ಮೋಸ್ಟ್ ವಾಂಟೆಡ್ ಭೂಗತಪಾತಕಿ ರವಿ ಪೂಜಾರಿ ಸದ್ಯದಲ್ಲೇ ಭಾರತಕ್ಕೆ ಹಸ್ತಾಂತರಿವಾಗಲಿದ್ದಾನೆ ಎಂದು ಹೇಳಲಾಗಿದೆ.
2019 ರ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ಮಧ್ಯೆ ಸೆನೆಗಲ್, ಭಾರತದ ನಡುವೆ ಒಪ್ಪಂದವಿಲ್ಲದ ಕಾರಣ ರವಿ ಪೂಜಾರಿ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ಎನಕಾನೂನು ತೊಡಕು ನಿವಾರಣೆಯಾಗಿದ್ದು, ಸದ್ಯದಲ್ಲೇ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲಾಗುತ್ತದೆ ಎನ್ನಲಾಗಿದೆ.
ಇನ್ನು, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡ ಸೆನೆಗಲ್ ದೇಶಕ್ಕೆ ತೆರಳಲಿದೆ. ಹೀಗಾಗಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ರವಿ ಪೂಜಾರಿ ವಿರುದ್ಧ 49 ಕೇಸುಗಳು ದಾಖಲಾಗಿವೆ.