ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರವಿ ಪೂಜಾರಿ ವಿರುದ್ಧ ಬೆಂಗಳೂರಿನ ತಿಲಕನಗರದಲ್ಲಿ ದಾಖಲಾಗಿದ್ದ ಜೋಡಿ ಕೊಲೆ ಪ್ರಕರಣ ಕುರಿತು ಸಿಸಿಬಿ ಪೊಲಿಸರು ಇಂದು ವಿಚಾರಣೆ ನಡೆಸಲಿದ್ದಾರೆ.
2007ರಲ್ಲಿ ಶಬ್ನಮ್ ಡೇವಲಪರ್ಸ್ ಮೇಲಿನ ಗುಂಡಿನ ದಾಳಿ ಮಾಡೋ ಜೊತೆಗೆ ಡಬಲ್ ಮರ್ಡರ್ ಪ್ರಕರಣ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಒಟ್ಟು 17ಜನರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆಯಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಕೇವಲ 15 ಮಂದಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ರು. ಇವರ ವಿಚಾರಣೆ ವೇಳೆ ಕೊಲೆ ಆರೋಪಿಗಳು ರವಿ ಪೂಜಾರಿ ಸಹಚರರೆಂದು ಬಾಯ್ಬಿಟ್ಟಿದ್ದರು. ಕೃತ್ಯದ ಮೂಲ ಆರೋಪಿಗಳಾದ ರವಿ ಪೂಜಾರಿ ಹಾಗೂ ಸುರೇಶ್ ಪೂಜಾರಿ ಇಬ್ಬರೂ ತಲೆಮರೆಸಿಕೊಂಡಿದ್ದರು.
ಇದೀಗ ಗ್ಯಾಂಗ್‍ಸ್ಟರ್ ರವಿ ಪೂಜಾರಿ ಪೊಲೀಸರ ಅತಿಥಿಯಾಗಿದ್ದು ಜೋಡಿ ಕೊಲೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಂದು ರವಿಯನ್ನ ವಿಚಾರಣೆ ನಡೆಸಲಿದ್ದಾರೆ.