ಬೆಂಗಳೂರು : ಡ್ರಗ್ ಮಾಫಿಯಾ ವಿಚಾರವಾಗಿ ಸಿಸಿಬಿ ವಶದಲ್ಲಿರುವ ನಟಿ ಮಣಿಯರಿಗೆ ಪೊಲೀಸರು ಮತ್ತು ಇಳಿಸುತ್ತಿದ್ದಾರಂತೆ. ಇಂದು ಬೆಳ್ಳಂ ಬೆಳಿಗ್ಗೆ ತುಪ್ಪದ ಹುಡ್ಗಿಗೆ ಶಾಕ್ ನೀಡಿದ ಸಿಸಿಬಿ ಅಧಿಕಾರಿಗಳು, ಸಂಜನಾರ ಎದೆ ಬಡಿತ ಹೆಚ್ಚಿಸಿದ್ದಾರೆ. ಈಗಾಗಲೇ ನಟಿಯರ ಆಪ್ತರಾದ ರವಿಶಂಕರ್, ರಾಹುಲ್ ಹಾಗೂ ಕಾರ್ತಿಕ್ ನ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೊಬೈಲ್ ನಲ್ಲಿ ಡ್ರಗ್ಸ್ ಮಾರಾಟದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರಂತೆ.
ರಾಹುಲ್ ಮೊಬೈಲ್ ನಲ್ಲಿವೆ ಮೂರು ಸಾವಿರ ಫೋಟೋಸ್
ಎಸ್..! ನಟಿ ಸಂಜನಾ ಸ್ನೇಹಿತ ರಾಹುಲ್ ಮೊಬೈಲ್ ನಲ್ಲಿ ಮೂರು ಸಾವಿರ ಫೋಟೋ ಮತ್ತು ವಿಡಿಯೋಗಳಿಯಂತೆ. ಅದರಲ್ಲಿ ಸಿನಿಮಾ, ಸೀರಿಯಲ್, ಮಾಡೆಲ್ ಗಳ ಫೋಟೋ ಮತ್ತು ವಿಡಿಯೋಗಳೇ ಗ್ಯಾಲರಿಯಲ್ಲಿ ತುಂಬಿವೆ. ಹಾಗೆ ಅಶ್ಲೀಲ ಫೋಟೋಗೆ ಬೇರೆ ಗ್ಯಾಲರಿ ಮಾಡಿದ್ದ ರಾಹುಲ್, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಇದೆಲ್ಲಾ ಕಾಮನ್ ಸರ್ ಅಂತ ಪೊಲೀಸರಿಗೆ ತಿಳಿಸಿದ್ದಾನೆ.
ಅಷ್ಟೇ ಅಲ್ಲದೆ ರಾಹುಲ್ ಚಾಟ್ ಲಿಸ್ಟ್ ನೋಡಿ ಕೂಡ ಪೊಲೀಸರಿಗೆ ಶಾಕ್ ಆಗಿದೆಯಂತೆ. ಯಾಕಂದ್ರೆ ರಾಹುಲ್ ಗೆ ಸಾಕಷ್ಟು ಹುಡುಗಿರು ತಮ್ಮ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವುಗಳಿಗೆ ವ್ಹಾವ್, ಓಕೆ, ಸೂಪರ್ ಎಂದು ಥಮ್ಸ್ ಅಪ್ ಸಿಂಬಲ್ ಹಾಕಿದ್ದಾನಂತೆ ರಾಹುಲಾ.
ಇದು ರಾಹುಲ್ ಕಥೆಯಾದ್ರೆ ರವಿಶಂಕರ್ ಕಹಾನಿಯೇ ಬೇರೆ. ತುಪ್ಪದ ಹುಡ್ಗಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ರವಿ ಶಂಕರನ ಗ್ಯಾಲರಿಯಲ್ಲಿ ರಾಗಿಣಿ ಫೋಟೋಗಳೇ ಹೆಚ್ಚು. ರಾಗಿಣಿ ಜೊತೆ ತೆಗೆಸಿಕೊಂಡಿರುವ ಫೋಟೋಗಳಲ್ಲಿ ಕೆಲವು ಆಪ್ತವಾಗಿ ಕ್ಲಿಕ್ಕಿಸಿರೋ ಫೋಟೋಗಳು ಸಹ ಇವೆಯಂತೆ. ಸದ್ಯಕ್ಕೆ ಇದನ್ನೆಲ್ಲಾ ಮುಂದಿಟ್ಟುಕೊಂಡು ಪೊಲೀಸರು ತನಿಖೆ ಶುರುಮಾಡಿದ್ದಾರೆ.








