Ravi Shastri : ಟೀಂ ಇಂಡಿಯಾಗೆ ಡಿಕೆ ಸಾಹೇಬ್ ರೀ ಎಂಟ್ರಿ..!
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮುನ್ನ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೆಲವು ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಐಪಿಎಲ್ 2022ರ ಸೀಸನ್ನಲ್ಲಿ ಅದ್ಭತ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮ್ಯಾಚ್ ಫಿನಿಶರ್ ಸ್ಥಾನಕ್ಕಾಗಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಆಯ್ಕೆ ಆಗುತ್ತಾರೆ. ಧೋನಿ ಬಳಿಕ ಟೀಂ ಇಂಡಿಯಾಗೆ ಉತ್ತಮ ಮ್ಯಾಚ್ ಫಿನಿಷರ್ ಸಿಗಲಿಲ್ಲ.
ಆದ್ರೆ ದಿನೇಶ್ ಕಾರ್ತಿಕ್ ಅವರಲ್ಲಿ ಆ ಸಾಮರ್ಥ್ಯವಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಡಿಕೆ ಅವರ ಪ್ರಸ್ತುತ ಫಾರ್ಮ್ ಗಮನದಲ್ಲಿಟ್ಟುಕೊಂಡು ಮಾತನಾಡುವುದಾದ್ರೆ ಟೀಂ ಇಂಡಿಯಾಕ್ಕೆ ದೊಡ್ಡ ಸಮಸ್ಯೆಯಾಗುವುದಿಲ್ಲ.
ಸದ್ಯ ವಿಕೆಟ್ ಕೀಪಿಂಗ್ ಗೆ ಪಂತ್, ಇಶಾನ್ ಇದ್ದರೂ ಮ್ಯಾಚ್ ಫಿನಿಷಿಂಗ್ ರೋಲ್ ನಲ್ಲಿ ಡಿ.ಕೆ. ಉತ್ತಮ ಆಯ್ಕೆಯಾಗಿದ್ದಾರೆ ಎಂದಿದ್ದಾರೆ ರವಿಶಾಸ್ತ್ರ.
ಈ ಋತುವಿನಲ್ಲಿ RCB ಪರ ಆಡಿದ 3 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ 204.55 ಸ್ಟ್ರೈಕ್ ರೇಟ್ನೊಂದಿಗೆ 90 ರನ್ ಗಳಿಸಿದ್ದಾರೆ.









