‘ವಿರಾಟ್, ನೀವೂ ತಲೆ ಎತ್ತಿ ನಡೆಯಬಹುದು..!!
ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ತಂಡದ ನಾಯಕತ್ವವನ್ನು ತ್ಯಾಗ ಮಾಡಿದ್ದಾರೆ.
ಮೂರು ಮಾದರಿಯ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದ ವಿರಾಟ್, ಇದೀಗ ಒಬ್ಬ ಸಾಮಾನ್ಯ ಆಟಗಾರನಾಗಿ ಮಾತ್ರ ತಂಡದಲ್ಲಿರಲು ಬಯಸಿದ್ದಾರೆ.
ಕಳೆದ ವರ್ಷ ಟಿ 20 ಕ್ರಿಕೆಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ವಿರಾಟ್, ವರ್ಷದ ಅಂತ್ಯದಲ್ಲಿ ಏಕದಿನ ನಾಯಕತ್ವವನ್ನು ಕಳೆದುಕೊಂಡರು.
ಇದಾದ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡಿಸಿದರು.
ಆದ್ರೆ ವಿರಾಟ್ ರ ಆಸೆಯಂತೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲಲಿಲ್ಲ. ಹೀಗಾಗಿ ವಿರಾಟ್ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದಾರೆ.
Virat, you can go with your head held high. Few have achieved what you have as captain. Definitely India's most aggressive and successful. Sad day for me personally as this is the team 🇮🇳 we built together – @imVkohli pic.twitter.com/lQC3LvekOf
— Ravi Shastri (@RaviShastriOfc) January 15, 2022
ವಿರಾಟ್ ಕೊಹ್ಲಿಯ ಈ ನಿರ್ಧಾರದಿಂದ ಕ್ರಿಕೆಟ್ ಜಗತ್ತು ಅಚ್ಚರಿಗೊಂಡಿದ್ದು, ವಿರಾಟ್ ಅಭಿಮಾನಿಗಳು ಮೂಡ್ ಔಟ್ ಆಗಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಈ ನಿರ್ಧಾರದ ಬಗ್ಗೆ ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ರವಿ ಶಾಸ್ತ್ರಿ ಟ್ವಿಟ್ಟರ್ ನಲ್ಲಿ.. ‘ವಿರಾಟ್, ನೀವೂ ತಲೆ ಎತ್ತಿ ನಡೆಯಬಹುದು. ನಾಯಕನಾಗಿ ನೀವೂ ಮಾಡಿರುವ ಸಾಧನೆಯನ್ನ ಕೆಲವರು ಮಾತ್ರ ಮಾಡಿದ್ದಾರೆ.
ಟೀಂ ಇಂಡಿಯಾದ ಅತ್ಯಂತ ಆಕ್ರಮಣಕಾರಿ ಮತ್ತು ಯಶಸ್ವಿ ನಾಯಕರಲ್ಲಿ ನೀವೂ ಒಬ್ಬರು.
ವೈಯಕ್ತಿಕವಾಗಿ ನನಗೆ ಇದು ದುಃಖದ ದಿನ. ಏಕೆಂದರೆ, ಇದು ನಾವು ಒಟ್ಟಾಗಿ ಕಟ್ಟಿರುವ ತಂಡವಾಗಿದೆ ಎಂದು ಭಾವುಕರಾಗಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜುಗಲ್ ಬಂಧಿ ಭಾರತಕ್ಕೆ ಎಷ್ಟೋ ಅವಿಸ್ಮರಣಿಯ ಗೆಲುವುಗಳನ್ನು ತಂದುಕೊಟ್ಟಿದೆ.