ಅಂಕಿ ಅಂಶಗಳ ಪ್ರಕಾರ ರವಿಶಾಸ್ತ್ರಿ ಟೀಮ್ ಇಂಡಿಯಾದ ಯಶಸ್ವಿ ಕೋಚ್…! |#Ravi Shastri #team india #headcoach #bcci
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಅಂದ ಮೇಲೆ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಕೂಡ ಯಶಸ್ವಿ ಕೋಚ್ ಅಗಿರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಹಾಗೇ ನೋಡಿದ್ರೆ, ನಾಯಕ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ನಡುವಿನ ಬಾಂಧವ್ಯವೂ ಚೆನ್ನಾಗಿಯೇ ಇದೆ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ನೇಮಕಗೊಂಡಿದ್ದರು. ಆದ್ರೆ ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿಯವರ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ ಅನ್ನೋದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಅದೇನೇ ಇರಲಿ, ಭಾರತ ಕ್ರಿಕೆಟ್ ತಂಡಡ ಆಟಗಾರನಾಗಿ, ನಾಯಕನಾಗಿ, ವೀಕ್ಷಕ ವಿವರಣೆಕಾರನಾಗಿ ಇದೀಗ ಕೋಚ್ ಆಗಿರುವ ರವಿಶಾಸ್ತ್ರಿ ಸೈ ಎನಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಗೆಲುವಿನ ಅಭಿಯಾನದಲ್ಲಿ ರವಿಶಾಸ್ತ್ರಿ ಅವರ ಕೊಡುಗೆಯೂ ಇದೆ. ಶಾಸ್ತ್ರಿ ಬಗ್ಗೆ ಕೆಲವೊಂದು ಟೀಕೆಗಳು ಆರೋಪಗಳು ಇರಬಹುದು. ಆದ್ರೆ ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ತಂಡದ ಯುವ ಆಟಗಾರರಿಗೆ ನೀಡಿರುವ ಬೆಂಬಲ ಮತ್ತು ಅವರ ಪ್ರತಿಭೆಗೆ ತಕ್ಕಂತೆ ಸಾಮಥ್ರ್ಯವನ್ನು ಪ್ರದರ್ಶಿಸಲು ರವಿಶಾಸ್ತ್ರಿ ಕೂಡ ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ.
ರವಿಶಾಸ್ತ್ರಿ ಇಲ್ಲಿಯವರೆಗೆ ಒಟ್ಟು 46 ಟೆಸ್ಟ್ ಪಂದ್ಯಗಳಿಗೆ ತಂಡದ ಹೆಡ್ ಕೋಚ್ ಆಗಿದ್ದರು. ಇದ್ರಲ್ಲಿ ಟೀಮ್ ಇಂಡಿಯಾ 28 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ಅದೇ ರೀತಿ ಜಾನ್ ರೈಟ್ ಎರಡನೇ ಸ್ಥಾನದಲ್ಲಿದ್ದಾರೆ. ಜಾನ್ ರೈಟ್ 52 ಟೆಸ್ಟ್ ಪಂದ್ಯಗಳಿಗೆ ಕೋಚ್ ಆಗಿದ್ದರು. ಇದ್ರಲ್ಲಿ 21 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿದೆ. #Ravi Shastri #team india #headcoach #bcci
ಇನ್ನು ಮೂರನೇ ಸ್ಥಾನದಲ್ಲಿರುವ ಗುರು ಗ್ಯಾರಿ ಕಸ್ಟರ್ನ್ – 33 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ 16 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಡಂಕನ್ ಫ್ಲಚರ್ 39 ಟೆಸ್ಟ್ ಪಂದ್ಯಗಳಲ್ಲಿ 13 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಅನಿಲ್ ಕುಂಬ್ಳೆಗೆ 17 ಟೆಸ್ಟ್ ಪಂದ್ಯಗಳಲ್ಲಿ 12 ಪಂದ್ಯಗಳನ್ನು ಗೆಲ್ಲಿಸಿರುವ ಹಿರಿಮೆ ಇದೆ.
ಹಾಗೇ ಭಾರತದ ವಿವಾದಾತ್ಮಕ ಕೋಚ್ ಗ್ರೇಗ್ ಚಾಪೆಲ್ 18 ಟೆಸ್ಟ್ ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಮಾತ್ರ ಟೀಮ್ ಇಂಡಿಯಾ ಗೆದ್ದಿದೆ.
ಏಕದಿನ ಪಂದ್ಯಗಳ ಪರ್ಸೆಂಟ್ ಪ್ರಕಾರ ಗ್ಯಾರಿ ಕಸ್ಟರ್ನ್ ಮುಂಚೂಣಿಯಲ್ಲಿದ್ದಾರೆ. ಗ್ಯಾರಿ ಕಸ್ಟರ್ನ್ ಕೋಚ್ ಆಗಿ ಟೀಮ್ ಇಂಡಿಯಾ 2011ರ ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿತ್ತು. ಅಲ್ಲದೆ ಒಟ್ಟಾರೆ, 93 ಏಕದಿನ ಪಂದ್ಯಗಳಲ್ಲಿ ಶೇ.63.44ರಂತೆ 59 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ.
ರವಿಶಾಸ್ತ್ರಿ ಇಲ್ಲಿಯವರೆಗೆ 91 ಏಕದಿನ ಪಂದ್ಯಗಳಲ್ಲಿ 57 ಪಂದ್ಯಗಳನ್ನು ಗೆಲ್ಲುವಲ್ಲಿ ಕೋಚ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಲ್ಲೂ ಕೂಡ ರವಿಶಾಸ್ತ್ರಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. #Ravi Shastri #team india #headcoach #bcci
ಜಾನ್ ರೈಟ್ 130 ಏಕದಿನ ಪಂದ್ಯಗಳಿಗೆ ಕೋಚ್ ಆಗಿದ್ದು, 68 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿದೆ.
ಡಂಕನ್ ಫ್ಲೆಚರ್ 108 ಏಕದಿನ ಪಂದ್ಯಗಳಲ್ಲಿ 65ರಲ್ಲಿ ಜಯ, ಅನಿಲ್ ಕುಂಬ್ಳೆ 19ರಲ್ಲಿ 13 ಗೆಲುವು ಹಾಗೂ ಗ್ರೇಗ್ ಚಾಪೆಲ್ 62ರಲ್ಲಿ 32 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ದಾಖಲಿಸಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಹಿಂದೆ ಹೆಡ್ ಕೋಚ್ ಆಗಿರುವ ರವಿಶಾಸ್ತ್ರಿಯವರ ಕೊಡುಗೆಯೂ ಇದೆ. ಅನಿಲ್ ಕುಂಬ್ಳೆ ಹೊರತುಪಡಿಸಿ ಈ ಹಿಂದಿನ ಕೋಚ್ ಗಳಿಗೆ ತಂಡವನ್ನು ಸಂಭಾಳಿಸೋದು ದೊಡ್ಡ ಹರಸಾಹಸವಾಗಿತ್ತು. ಯಾಕಂದ್ರೆ ಆಗ ಟೀಮ್ ಇಂಡಿಯಾದಲ್ಲಿ ವಿಶ್ವದ ಅಪ್ರತಿಮ ಆಟಗಾರರಿದ್ದರು.
ಆದ್ರೆ ರವಿಶಾಸ್ತ್ರಿಗೆ ಹಾಗಲ್ಲ. ಯಂಗ್ ಇಂಡಿಯಾದ ಹುಡುಗರನ್ನು ಬೆಳೆಸುವುದು ದೊಡ್ಡ ಸವಾಲಾಗಿತ್ತು. ಇದೀಗ ಶಾಸ್ತ್ರಿ ಆ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ.