ಮುದ್ದಾದ ನಾಯಿ ಮರಿ ಜೊತೆ ರವಿಶಾಸ್ತ್ರಿ ಆಟ… ಬೊಂಬಾಟ್..!
ಜೂನ್ 18ರಿಂದ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ಈಗಾಗಲೇ ಉಭಯ ತಂಡಗಳು ಪಂದ್ಯಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿವೆ. ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಇನ್ನೊಂದೆಡೆ ಮಹತ್ವದ ಪಂದ್ಯಕ್ಕೆ ಮುನ್ನ ಟೀಮ್ ಇಂಡಿಯಾ ಪಂದ್ಯನ್ನಾಡಿಲ್ಲ. ಆದ್ರೂ ನೆಟ್ಸ್ ನಲ್ಲಿ ಕಠಿಣ ತರಬೇತಿಯನ್ನು ನಡೆಸುತ್ತಿದೆ.
ಟೀಮ್ ಇಂಡಿಯಾ ಹೆಡ್ ಕೋಚ್ ರವಿಶಾಸ್ತ್ರಿ ಅವರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ಟೆಸ್ಟಿಂಗ್ ಟೈಮ್ ಆಗಲಿದೆ. ಟೀಮ್ ಇಂಡಿಯಾದ ಯಶಸ್ವಿ ಕೋಚ್ ಆಗಿರುವ ರವಿಶಾಸ್ತ್ರಿಗೆ ತಂಡವನ್ನು ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ.
ಇನ್ನು ಸೌತಾಂಪ್ಟನ್ ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಟೀಮ್ ಇಂಡಿಯಾದ ಕೋಚ್ ಗೆ ಹೊಸ ಸ್ನೇಹಿತರೊಬ್ಬರು ಸಿಕ್ಕಿದ್ದಾರೆ.
ಹೌದು, ರವಿಶಾಸ್ತ್ರಿ ಅವರಿಗೆ ಮೈದಾನದಲ್ಲಿ ಸಿಕ್ಕಿರುವ ಹೊಸ ಸ್ನೇಹಿತನ ಹೆಸರು ವಿನ್ಸ್ಟನ್ ಲೀ.