Ravi Teja | ಸಂಭಾವಣೆ ತಗ್ಗಿಸಿಕೊಂಡ ಮಾಸ್ ಮಹಾರಾಜ
ನಟ ರವಿತೇಜ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ, ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ, ಸ್ವಯಂ ಕೃಷಿಯಿಂದ ಮಾಸ್ ಮಹಾರಾಜನಾಗಿ ಬೆಳೆದ ಹೀರೋ. ಎಷ್ಟೇ ಎತ್ತರಕ್ಕೆ ಬೆಳೆದ್ರೂ ಡೌನ್ ಟು ಅರ್ಥ್ ಆಗಿರುವ ರವಿತೇಜ, ಸದ್ಯ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ಫುಲ್ ಜೋಶ್ ನಲ್ಲಿದ್ದಾರೆ.
ಸದ್ಯ ರವಿತೇಜಾ ನಟನೆಯ ‘ರಾಮರಾವ್ ಆನ್ ಡ್ಯೂಟಿ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ನಲ್ಲಿದ್ದು ಸದ್ದು ಮಾಡುತ್ತಿದೆ. ಆದರೆ, ಈ ಚಿತ್ರಕ್ಕೆ ರವಿತೇಜ ಪಡೆದ ಸಂಭಾವನೆ ಇದೀಗ ಹಾಟ್ ಟಾಪಿಕ್ ಆಗಿದೆ. ಈ ಚಿತ್ರಕ್ಕಾಗಿ ರವಿತೇಜಾ ಕಡಿಮೆ ಸಂಭಾವಣೆ ಪಡೆದಿದ್ದಾರೆ ಎಂಬುದು ಟಾಲಿವುಡ್ ನ ಟಾಕ್ ಆಗಿದೆ.
ಶರತ್ ಮಾಂಡವ ನಿರ್ದೇಶನದ ಈ ಚಿತ್ರಕ್ಕೆ ರವಿತೇಜ ಪ್ರತಿದಿನಕ್ಕೆ 50 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ. ಈ ಸಿನಿಮಾಗಾಗಿ ರವಿತೇಜ 20 ರಿಂದ 25 ದಿನಗಳು ಮಾತ್ರ ಕೆಲಸ ಮಾಡಿದ್ದಾರೆ. ಅಂದ್ರೆ ಈ ಸಿನಿಮಾಗೆ ರವಿತೇಜಾ ಪಡೆದ ಒಟ್ಟು ಸಂಭಾವಣೆ 10 ರಿಂದ 12 ಕೋಟಿ ರೂಪಾಯಿ.
ಆದರೆ ರವಿತೇಜ ಅವರು ಸಾಮಾನ್ಯವಾಗಿ ಪ್ರತಿ ಸಿನಿಮಾಗೆ 15 ಕೋಟಿಗೂ ಹೆಚ್ಚು ರೂಪಾಯಿ ಸಂಭಾವಣೆ ಪಡೆಯುತ್ತಾರೆ. ಆದ್ರೆ ಈ ಸಿನಿಮಾಗಾಗಿ ಮೂರರಿಂದ ನಾಲ್ಕು ಕೋಟಿ ಕಡಿಮೆ ಮಾಡಿರೋದು ಟಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಕೆಲವರು ರವಿತೇಜಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ರಾಮರಾವ್ ಆನ್ ಡ್ಯೂಟಿ ಸಿನಿಮಾ ಏಪ್ರಿಲ್ 15ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾದ ಟೈಟಲ್ ವಿಚಾರವಾಗಿ ಈ ಹಿಂದೆ ನಂದಮುರಿ ಅಭಿಮಾನಿಗಳು ಮತ್ತು ರವಿತೇಜಾ ಅಭಿಮಾನಿಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು. ಆದರೇ ಈ ವಿವಾದಕ್ಕೆ ಸ್ವತಃ ನಟ ಬಾಲಕೃಷ್ಣ ಅವರೇ ಫುಲ್ ಸ್ಟಾಪ್ ಇಟ್ಟಿದ್ದರು.
ಎಸ್ ಬಿಕೆ ನಾನ್ ಸ್ಟಾಪಬಲ್ ಕಾರ್ಯಕ್ರಮದಲ್ಲಿ ರವಿತೇಜಾ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಬಾಲಕೃಷ್ಣ – ರವಿತೇಜಾ ಎಲ್ಲಾ ಗೊಂದಲ, ವಿವಾದಗಳಿಗೆ ತೆರೆ ಎಳೆದರು.
Ravi-teja-less-remuneration saaksha tv