ಕಪಿಲ್ ದೇವ್ ದಾಖಲೆ ಪುಡಿಗಟ್ಟಲಿದ್ದಾರೆ ಅಶ್ವಿನ್ ravichandran ashwin saaksha tv
ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗಾಯಗೊಂಡ ಸಿಂಹದಂತೆ ತಂಡದಲ್ಲಿ ಅಬ್ಬರಿಸುತ್ತಿದ್ದಾರೆ.
ಬ್ಯಾಡ್ ಪಾರ್ಮ್, ಇಂಜೂರಿ ಸಮಸ್ಯೆಯಿಂದ ತಂಡಕ್ಕೆ ದೂರವಾಗಿದ್ದ ಅಶ್ವಿನ್ ಇದೀಗ ತಂಡದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ.
ಪ್ರತಿ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಸಾಗುತ್ತಿರುವ ಅಶ್ವಿನ್ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಹಾಗೇ ದಾಖಲೆಗನ್ನ ಪುಡಿಗಟ್ಟಿದ್ದಾರೆ.
ಸದ್ಯ ಶಿಸ್ತುಬದ್ಧವಾಗಿ ಟೀಂ ಇಂಡಿಯಾದ ಪರ ಆಡುತ್ತಾ ವಿಕೆಟ್ ಬೇಟೆಯಾಡಿತ್ತಿರುವ ಅಶ್ವಿನ್, ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಹರಿಣಗಳ ಬೇಟೆಗೆ ಸಜ್ಜಾಗಿದ್ದಾರೆ.
ವಿದೇಶಿ ನೆಲದಲ್ಲಿ ಅಶ್ವಿನ್ ಗೆ ಜಾನ್ಸ್ ಸಿಗೋದು ಅನುಮಾನ. ಆದ್ರೆ ಸದ್ಯ ರವಿಚಂದ್ರನ್ ಉತ್ತಮ ಪಾರ್ಮ್ ನಲ್ಲಿದ್ದು, ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗೋದು ಪಕ್ಕಾ ಆಗಿದೆ.
ಒಂದೇ ವೇಳೆ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ.. ಕಪಿಲ್ ದೇವ್ ದಾಖಲೆ ಮುರಿಯಲಿದೆ.
ಹೌದು..! ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 7 ವಿಕೆಟ್ ಪಡೆದರೆ ಭಾರತದ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಸದ್ಯ 81 ಪಂದ್ಯಗಳನ್ನಾಡಿರುವ ಅಶ್ವಿನ್, 427 ವಿಕೆಟ್ ಪಡೆದಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದು, ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಆದ್ರೆ ದಕ್ಷಿಣಾ ಆಫ್ರಿಕಾ ನೆಲದಲ್ಲಿ ಅಶ್ವಿನ್ 7 ವಿಕೆಟ್ ಪಡೆದೇ ಕಪಿಲ್ ದಾಖಲೆ ಮುರಿಯಲಿದೆ.
ಸದ್ಯ ಅದ್ಬುತ ಪಾರ್ಮ್ ನಲ್ಲಿರುವ ರವಿಚಂದ್ರನ್ ಅಶ್ವಿನ್ ದಕ್ಷಿಣಾ ಆಫ್ರಿಕಾದಲ್ಲಿ ಮ್ಯಾಜಿಕ್ ಮಾಡುತ್ತಾರೆ ಅನ್ನೋ ವಿಶ್ವಾಸ ಎಲ್ಲರಲ್ಲೂ ಮೂಡಿದೆ. ಹಾಗೇ ಕಪಿಲ್ ದೇವ್ ಅವರ ದಾಖಲೆಯನ್ನು ಕೂಡ ಮುರಿಯೋದು ಪಕ್ಕಾ.
ಆದ್ರೆ ಅದು ಮೊದಲ ಪಂದ್ಯದಲ್ಲೋ ಎರಡನೇ ಪಂದ್ಯದಲ್ಲೋ ಅಥವಾ ಮೂರನೇ ಪಂದ್ಯದಲ್ಲೋ ಅನ್ನೋದಷ್ಟೆ ಸದ್ಯದ ಕುತೂಹಲವಾಗಿದೆ.
ಇನ್ನು ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳಲ್ಲಿ 619 ವಿಕೆಟ್ ಗಳ ಮೂಲಕ ಕನ್ನಡಿಗ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 800 ವಿಕೆಟ್ ಗಳೊಂದಿಗೆ ಮುರಳೀಧರನ್ ಮೊದಲಸ್ಥಾನ, 798 ವಿಕೆಟ್ ಗಳೊಂದಿಗೆ ಶೇನ್ ವಾರ್ನ್ ಎರಡನೇ ಸ್ಥಾನ,
635 ವಿಕೆಟ್ ಗಳೊಂದಿಗೆ ಜೇಮ್ಸ್ ಆ್ಯಂಡರ್ಸನ್ ಮೂರನೇ ಸ್ಥಾನ, ಅನಿಲ್ ಕುಂಬ್ಳೆ ನಾಲ್ಕನೇ ಸ್ಥಾನದಲ್ಲಿದ್ದಾರೆ.









