ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೊರೊನಾ ಪಾಸಿಟಿವ್ …
ಭಾರತ ಕ್ರಿಕೆಟ್ ತಂಡದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಈ ಕಾರಣದಿಂದಾಗಿ ಅಶ್ವಿನ್ ಐದನೇ ಟೆಸ್ಟ್‌ಗಾಗಿ ಇಂಗ್ಲೆಂಡ್‌ಗೆ ಸಹ ಆಟಗಾರರೊಂದಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗಿಲ್ಲ.
ಅಶ್ವಿನ್ ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದು, ಎಲ್ಲಾ ಪ್ರೋಟೋಕಾಲ್ ಅವಶ್ಯಕತೆಗಳನ್ನು ಪೂರೈಸಿದ ನಂತರವೇ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.
ಇಂಗ್ಲೆಂಡ್ ಗೆ ಹೊರಡುವ ಮೊದಲು ಕೋವಿಡ್ -19 ಪರೀಕ್ಷೆಲ್ಲಿ ಪಾಸಿಟಿವ್ ಬಂದ ಕಾರಣ ಅಶ್ವಿನ್ ತಂಡದ ಜೊತೆ ಯುಕೆಗೆ ಪ್ರಯಾಣಿಸಿಲ್ಲ. ಜುಲೈ 1 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ಚೇತರಿಸಿಕೊಳ್ಳುವ ಭರವಸೆ ನಮಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ,
ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಹೊರತುಪಡಿಸಿ ಎಲ್ಲಾ ಆಟಗಾರರು ಜೂನ್ 16 ರಂದು ಲಂಡನ್ ತಲುಪಿದ್ದಾರೆ. ಈಗ ಎಲ್ಲಾ ಆಟಗಾರರು ಲೀಸೆಸ್ಟರ್ ತಲುಪಿದ್ದಾರೆ. ಇಲ್ಲಿ ಟೀಂ ಇಂಡಿಯಾ ಜೂನ್ 24 ರಿಂದ ಕೌಂಟಿ ತಂಡ ಲೀಸೆಸ್ಟರ್ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಕೋಚ್ ದ್ರಾವಿಡ್, ಶ್ರೇಯಸ್ ಮತ್ತು ಪಂತ್ ಸೋಮವಾರ ಲೀಸೆಸ್ಟರ್‌ಗೆ ಆಗಮಿಸಿದ್ದಾರೆ.








