ಕನ್ನಡಾಭಿಮಾನಿಗಳ , ಕನಸುಗಾರ , ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ 61 ನೇ ಹುಟ್ಟುಹಬ್ಬದ ಸಂಭ್ರಮ.. ಮೇ 30 ರಂದು ಸದ್ಯ ಸಿನಿಮಾಗಳ ಜೊತೆಗೆ ಕಿರುತೆರೆ ರಿಯಾಲಿಟಿ ಶೋಗಳಲ್ಲೂ ರವಿಚಂದ್ರನ್ ಬ್ಯುಸಿಯಾಗಿದ್ದಾರೆ.. 1982ರಲ್ಲಿ ರವಿಚಂದ್ರನ್ ನಾಯಕನಾಗಿ ಸಿನಿಮಾರಂಗ ಪ್ರವೇಶ ಮಾಡಿದ್ದರು.. ಸುಮಾರು 40 ವರ್ಷಗಳು ಸಿನಿಮಾರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ..
ನಟ ಅಷ್ಟೇ ಅಲ್ದೇ ನಿರ್ಮಾಪಕರಾಗಿ , ನಿರ್ದೇಶಕರಾಗಿಯೂ ರವಿಮಾಮ ಗುರುತಿಸಿಕೊಂಡಿದ್ದಾರೆ. ಕನಸುಗಾರ , ನಾನು ನನ್ನ ಹೆಂಡ್ತೀರು , ಪ್ರೇಮಲೋಕದಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಇಂದಿಗೂ ಜನರ ಮನಸ್ಸಲ್ಲಿ ಜಾಗಪಡೆದಿದ್ದಾರೆ ರವಿಮಾಮ..
ರವಿಚಂದ್ರನ್ ಸಿನಿಮಾ ಅಂದ್ರೆ… ಆ ಸಿನಿಮಾದ ಕ್ರೇಜ್ ಬೇರೆನೇ ಆಗಿರುತಿತ್ತು.. ಅವರು ಮಾಡೋ ಸಿನಿಮಾದ ಖದರೇ ಬೇರೆ ಇರುತಿತ್ತು.. ಆ ಜಮಾನದಲ್ಲೇ ಶಾಂತಿ ಕ್ರಾಂತಿ ಮೂಲಕ ಪ್ಯಾನ್ ಇಂಡಿಯಾ ಕ್ರಾಂತಿಗೆ ನಾಂದಿ ಹಾಡಿದ್ದವರು ರವಿಚಂದ್ರನ್..








