ravindra jadeja ಟೀಂ ಇಂಡಿಯಾಗೆ ಗುಡ್ ನ್ಯೂಸ್.. ಜಡ್ಡು ಫಿಟ್
ಏಷ್ಯಾ ಕಪ್ ನಲ್ಲಿ ಗಾಯಗೊಂಡು ಟಿ 20 ವಿಶ್ವಕಪ್ ಗೆ ದೂರವಾಗಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯ ಫಿಟ್ ಆಗಿದ್ದಾರೆ.
ಜಡ್ಡು ಜಿಮ್ ನಲ್ಲಿರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಜಡ್ಡು ಸಂಪೂರ್ಣವಾಗಿ ಗಾಯದಿಂದ ಚೇತರಿಸಿಕೊಂಡಂತೆ ಕಾಣುತ್ತದೆ.
ಸದ್ಯ ಜಡೇಜಾ ಫಿಟ್ ಆಗಿದ್ದರೂ ಟೀಂ ಇಂಡಿಯಾಗೆ ವಾಪಸ್ ಆಗುವ ಸಾಧ್ಯತೆಗಳಿವೆ.

ಟಿ 20 ವಿಶ್ವಕಪ್ ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿರುವುದು ಗೊತ್ತಿರುವ ವಿಚಾರವೇ.
ಜಡ್ಡು ಗಾಯಗೊಂಡ ಕಾರಣದಿಂದಾಗಿ ಯುವ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ದಕ್ಕಿದೆ.
ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ.








