Ravindra Jadeja : ಚೆನ್ನೈ ತಂಡಕ್ಕೆ ಜಡ್ಡು ಗುಡ್ ಬೈ?
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಗೆ ಗುಡ್ ಬೈ ಹೇಳಲಿದ್ದಾರೆ ಅನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅಲ್ಲದೇ ಮುಂಬರುವ ಐಪಿಎಲ್ ಸೀಸನ್ ನಿಂದಲೇ ಜಡ್ಡು ಚೆನ್ನೈ ತಂಡದಿಂದ ದೂರ ಇರಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ಘಟನೆಗಳು ಕೂಡ ನಡೆದಿವೆ. ರವೀಂದ್ರ ಜಡೇಜಾ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆ ಸಂಬಂಧಿಸಿದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಇದರೊಂದಿಗೆ ಸಿಎಸ್ ಕೆ ಜಡ್ಡು ಗುಡ್ ಬೈ ಹೇಳಲಿದ್ದಾರೆ ಅನ್ನೋ ವಾದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿ ಮಾತನಾಡಿದ್ದು, ಜಡೇಜಾ ಪೋಸ್ಟರ್ ಗಳನ್ನು ಡಿಲೀಟ್ ಮಾಡಿದ್ದು, ಅವರ ವೈಯುಕ್ತಿಕ ವಿಚಾರ.
ಅವರಿಗೆ ನಮ್ಮ ತಂಡದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ.
ಆದ್ರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಜಡೇಜಾ ಮತ್ತು ಸಿಎಸ್ ಕೆಗೆ ಸಂಬಂಧಿಸಿದ ಮಾತುಗಳು ಹರಿದಾಡುತ್ತಲೇ ಇವೆ.
ಮುಂದಿನ ಐಪಿಎಲ್ ಸೀಸನ್ ವೇಳೆ ಜಡೇಜಾ ಯಾವ ತಂಡದಲ್ಲಿ ಇರ್ತಾರೆ ಅನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಅಂದಹಾಗೆ ಸಿಎಸ್‌ಕೆ ಜಡೇಜಾರನ್ನು ಆಟಗಾರರ ಮೆಗಾ ಹರಾಜಿಗೂ ಮುನ್ನ 17 ಕೋಟಿ ರೂಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು.
ಕಳೆದ ಕೆಲ ವರ್ಷಗಳಿಂದ ಜಡೇಜಾ ಸಿಎಸ್ ಕೆಯ ಟ್ರಂಪ್ ಕಾರ್ಡ್ ಆಟಗಾರನಿಗೂ ತಂಡದಲ್ಲಿದ್ದರು.
2021 ರ ಸೀಸನ್ ಆರಂಭದಲ್ಲಿ ಜಡೇಜಾ ಸಿಎಸ್‌ಕೆ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.
ಆದರೆ ಅದರಲ್ಲಿ ಯಶಸ್ಸು ಕಾಣಲಿಲ್ಲ. ಜೊತೆಗೆ ವೈಯಕ್ತಿಕ ಪ್ರದರ್ಶನವೂ ಕುಂಠತವಾಯಿತು.
ಇದರಿಂದ ಜಡೇಜಾಸ ಸಿಎಸ್‌ಕೆ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿದರು.

ಇದಾದ ಬಳಿಕ ಜಡೇಜಾ ಗಾಯಗೊಂಡು ತಂಡದಿಂದ ಹೊರ ಬಿದ್ದರು.
ಅದಾದ ಮೇಲೆ ಜಡೇಜಾ ಮತ್ತು ಸಿಎಸ್‌ಕೆ ನಡುವಿನ ಗ್ಯಾಪ್ ದೊಡ್ಡದಾಗುತ್ತಾ ಹೋಗಿದೆ.
ಜಡೇಜಾ ತಂಡ ಬಿಡ್ತಾರೆ ಅನ್ನುವ ಸುದಿದ ಹರಿದಾಡ ತೊಡಗಿದೆ. ಈಗ ಜಡೇಜಾ ಸಿಎಸ್‌ಕೆಗೆ ಸಂಬಂಧ ಪಟ್ಟ ಟ್ವಿಟರ್ ಮತ್ತು ಇನ್ಸ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಇದು ಜಡೇಜಾ ಸಿಎಸ್‌ಕೆ ತೊರೆಯುವ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಈ ನಡುವೆ ಜಡೇಜಾ ಮತ್ತು ಧೋನಿ ನಡುವಿನ ಸಂಬಂಧವೂ ಹಳಸಿದೆ ಅನ್ನುವ ಮಾತಿದೆ.
ಇದೆಲ್ಲದರ ಜೊತೆಗೆ ಜಡ್ಡು ಅಂಬಾಟಿ ರಾಯುಡು ಮತ್ತು ದೀಪಕ್ ಚಹರ್ ಜೊತೆಗಿನ ಫೋಟೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ.
ಆದರೆ ರಾಕ್‌ಸ್ಟಾರ್ ಜಡೇಜಾ ಮತ್ತು ಸಿಎಸ್‌ಕೆ ನಡುವಿನ ಸಂಬಂಧ ಹಳಸಲು ಕಾರಣವೇನು ಅನ್ನುವುದು ಕೂಡ ಬಹಿರಂಗವಾಗಿಲ್ಲ.








