ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಪಂದ್ಯಗಳಿಗೆ ರವೀಂದ್ರ ಜಡೇಜಾ ಅನುಮಾನ…!
ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಇಂಗ್ಲೆಂಡ್ ವಿರುದ್ದದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ಅಷ್ಟೇ ಅಲ್ಲ, ಟಿ-ಟ್ವೆಂಟಿ ಸರಣಿಗೂ ತಂಡಕ್ಕೆ ಆಯ್ಕೆಯಾಗೋದು ಅನುಮಾನವಾಗಿದೆ.
ಆಸ್ಟ್ರೇಲಿಯಾದ ಸರಣಿಯ ವೇಳೆ ರವೀಂದ್ರ ಜಡೇಜಾ ಅವರು ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಸದ್ಯ ಜಡೇಜಾ ಅವರು ಗಾಯದಿಂದ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಸರಣಿಯ ವೇಳೆ ರವೀಂದ್ರ ಜಡೇಜಾ ಅವರ ಹೆಲ್ಮೆಟ್ ಗೆ ಚೆಂಡು ಬಡಿದು ಗಾಯಮಾಡಿಕೊಂಡು ಅವರು ಪಂದ್ಯದಿಂದ ಹೊರನಡೆದಿದ್ದರು. ಹೀಗಾಗಿ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಆಡಿರಲಿಲ್ಲ. ಆದ್ರೆ ಮೆಲ್ಬರ್ನ್ ಟೆಸ್ಟ್ ನಲ್ಲಿ ಆಡುತ್ತಿದ್ದಾಗ ಜಡೇಜಾ ಅವರು ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.
ನಂತರ ಎರಡು ಟೆಸ್ಟ್ ಪಂದ್ಯಗಳಲ್ಲೂ ಆಡಿರಲಿಲ್ಲ. ಹಾಗೇ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೂ ಆಯ್ಕೆಯಾಗಿರಲಿಲ್ಲ. ಅದೇ ರೀತಿ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗುತ್ತಾರೆ ಅಂತ ಅಂದುಕೊಳ್ಳಲಾಗಿತ್ತು. ಇದೀಗ ಅನುಮಾನವಾಗಿದೆ. ಅಲ್ಲದೆ ಟಿ-ಟ್ವೆಂಟಿ ಸರಣಿಯ ವೇಳೆಗೂ ರವೀಂದ್ರ ಜಡೇಜಾ ಗುಣಮುಖರಾಗೋದು ಡೌಟ್ ಆಗಿದೆ.
ಸದ್ಯ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಒಂದು ಕಡೆ ವಾಷಿಂಗ್ಟನ್ ಸುಂದರ್ ಮತ್ತೊಂದು ಕಡೆ ಅಕ್ಸರ್ ಪಟೇಲ್ ನಡುವೆ ಸ್ಪರ್ಧೆ ನಡೆಯುತ್ತಿದೆ. ಈ ನಡುವೆ ವಾಷಿಂಗ್ಟನ್ ಸುಂದರ್ ಅವರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಆದ್ರೆ ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬುವುದು ಕಷ್ಟ. ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ರವೀಂದ್ರ ಜಡೇಜಾ ಆಲ್ ರೌಂಡರ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟ್, ಬೌಲಿಂಗ್ ಜೊತೆ ತನ್ನ ಮಿಂಚಿನ ವೇಗದ ಫೀಲ್ಡಿಂಗ್ ಮೂಲಕವೂ ರವೀಂದ್ರ ಜಡೇಜಾ ಗಮನ ಸೆಳೆಯುತ್ತಿದ್ದಾರೆ.