ADVERTISEMENT
Wednesday, February 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022: ಮುಂದುವರಿದ ಆರ್ಸಿಬಿ ಗೆಲುವಿನ ಓಟ; 4ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಪರದಾಟ

Vivek Biradar by Vivek Biradar
April 10, 2022
in Newsbeat, Sports, ಕ್ರಿಕೆಟ್
RCB Saaksha Tv
Share on FacebookShare on TwitterShare on WhatsappShare on Telegram

IPL 2022: ಮುಂದುವರಿದ ಆರ್ಸಿಬಿ ಗೆಲುವಿನ ಓಟ; 4ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಪರದಾಟ
ಕೈಕೊಟ್ಟ ಬ್ಯಾಟಿಂಗ್ ವಿಭಾಗ, ಫಲ ನೀಡದ ತಂತ್ರಗಾರಿಕೆ, ವರ್ಕೌಟ್ ಆಗದ ಪ್ಲೇಯಿಂಗ್ ಇಲೆವೆನ್ ಬದಲಾವಣೆ… ಹೀಗೆ ಪಂದ್ಯದ ಎಲ್ಲಾ ವಿಭಾಗದಲ್ಲೂ ನಿರೀಕ್ಷಿತ ಯಶಸ್ಸು ಕಾಣದ ಮುಂಬೈ ಇಂಡಿಯನ್ಸ್, 2022ರ ಐಪಿಎಲ್ನಲ್ಲಿ ಸತತ 4ನೇ ಸೋಲಿನ ಆಘಾತ ಕಂಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, 20 ಓವರ್ಗಳಲ್ಲಿ 151/6 ರನ್ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 18.3 ಓವರ್ನಲ್ಲಿ 3 ವಿಕೆಟ್ಗೆ 152 ರನ್ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯ ಮೂರನೇ ಗೆಲುವು ಸಾಧಿಸಿದ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೇರಿದೆ.
ರಾವತ್-ಕೊಹ್ಲಿ ಜೊತೆಯಾಟ
ಮುಂಬೈ ನೀಡಿದ 152 ರನ್ಗಳ ಸವಾಲು ಎದುರಿಸಿದ ಆರ್ಸಿಬಿಗೆ ನಾಯಕ ಫಾಫ್ ಡುಪ್ಲೆಸ್ಸಿ16 ರನ್(24 ಬಾಲ್, 1 ಬೌಂಡರಿ) ಹಾಗೂ ಅನುಜ್ ರಾವತ್ 66 ರನ್(47 ಬಾಲ್, 2 ಬೌಂಡರಿ, 6 ಸಿಕ್ಸ್) ಮೊದಲ ವಿಕೆಟ್ಗೆ 50 ರನ್ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ 48 ರನ್ (36 ಬಾಲ್, 5 ಬೌಂಡರಿ) ಜವಾಬ್ದಾರಿಯ ಆಟವಾಡಿದರು. ಬಲಿಷ್ಠ ಬ್ಯಾಟಿಂಗ್ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಈ ಜೋಡಿ, 2ನೇ ವಿಕೆಟ್ಗೆ 80 ರನ್ಗಳ ಜೊತೆಯಾಟದಿಂದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್ 7* ಹಾಗೂ ಮ್ಯಾಕ್ಸ್ವೆಲ್ 8* ತಂಡವನ್ನ ಗೆಲುವಿನ ದಡಸೇರಿಸಿದರು.

RCB Saaksha Tv
ಮುಂಬೈ ಕೈಹಿಡಿದ ಸೂರ್ಯ
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ನಾಯಕ ರೋಹಿತ್ ಶರ್ಮ(26) ಹಾಗೂ ಇಶಾನ್ ಕಿಶನ್(26) ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟದ ಆರಂಭ ನೀಡಿದರು. ನಂತರದಲ್ಲಿ ಆರ್ಸಿಬಿ ಬೌಲರ್ಗಳ ಎದುರು ತತ್ತರಿಸಿದ ಮುಂಬೈ ನಾಟಕೀಯ ಕುಸಿತ ಕಂಡಿತು. ಡೆವಾಲ್ಡ್ ಬ್ರೆವಿಸ್(8), ತಿಲಕ್ ವರ್ಮ(0), ಕೈರನ್ ಪೊಲಾರ್ಡ್(0) ಹಾಗೂ ರಮಣದೀಪ್ ಸಿಂಗ್(6) ಇಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿಕೊಂಡರು. ಆರ್ಸಿಬಿ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಸೂರ್ಯಕುಮಾರ್ ಯಾದವ್ 68 ರನ್(37 ಬಾಲ್, 5 ಬೌಂಡರಿ, 6 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. 7ನೇ ವಿಕೆಟ್ಗೆ ಉನಾದ್ಕಟ್(13*) ಜೊತೆಗೂಡಿ ಅಜೇಯ 72 ರನ್ಗಳಿಸಿ ತಂಡಕ್ಕೆ ಆಸರೆಯಾದರು.
ಆರ್ಸಿಬಿ ಪರ ವನಿಂದು ಹಸರಂಗ(2/28), ಹರ್ಷಲ್ ಪಟೇಲ್(2/23), ಆಕಾಶ್ ದೀಪ್(1/20) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.

Related posts

ಟಿ20 ವಿಶ್ವಕಪ್ 2026 : ನಾವು ಅನಕ್ಷರಸ್ಥರು ಆದ್ದರಿಂದಲೇ ಭಾರತದ ವಿರುದ್ಧ ಹೀನಾಯ ಸೋಲು ಕಂಡೆವು ಪಾಕ್ ತಂಡದ ವಿರುದ್ಧ ಮಾಜಿ ಆಟಗಾರನ ಆಕ್ರೋಶ

ಟಿ20 ವಿಶ್ವಕಪ್ 2026 : ನಾವು ಅನಕ್ಷರಸ್ಥರು ಆದ್ದರಿಂದಲೇ ಭಾರತದ ವಿರುದ್ಧ ಹೀನಾಯ ಸೋಲು ಕಂಡೆವು ಪಾಕ್ ತಂಡದ ವಿರುದ್ಧ ಮಾಜಿ ಆಟಗಾರನ ಆಕ್ರೋಶ

February 18, 2026
ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

February 18, 2026
Tags: #Saaksha TVipl 2022mumbai indiansRCB
ShareTweetSendShare
Join us on:

Related Posts

ಟಿ20 ವಿಶ್ವಕಪ್ 2026 : ನಾವು ಅನಕ್ಷರಸ್ಥರು ಆದ್ದರಿಂದಲೇ ಭಾರತದ ವಿರುದ್ಧ ಹೀನಾಯ ಸೋಲು ಕಂಡೆವು ಪಾಕ್ ತಂಡದ ವಿರುದ್ಧ ಮಾಜಿ ಆಟಗಾರನ ಆಕ್ರೋಶ

ಟಿ20 ವಿಶ್ವಕಪ್ 2026 : ನಾವು ಅನಕ್ಷರಸ್ಥರು ಆದ್ದರಿಂದಲೇ ಭಾರತದ ವಿರುದ್ಧ ಹೀನಾಯ ಸೋಲು ಕಂಡೆವು ಪಾಕ್ ತಂಡದ ವಿರುದ್ಧ ಮಾಜಿ ಆಟಗಾರನ ಆಕ್ರೋಶ

by Shwetha
February 18, 2026
0

ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಏಕಪಕ್ಷೀಯವಾಗಿ ಮುಕ್ತಾಯಗೊಂಡಿದೆ. ಭಾನುವಾರ ಕೊಲಂಬೊದ ಆರ್...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 18, 2026
0

ದಿನ ಭವಿಷ್ಯ: 18-02-2026 1 ಮೇಷ ರಾಶಿ ಅಶ್ವಿನಿ ಭರಣಿ ಕೃತ್ತಿಕೆ 1ನೇ ಪಾದ ಇಂದು ಮೇಷ ರಾಶಿಯವರಿಗೆ ಚಂದ್ರನ ಸಂಚಾರವು ಲಾಭದಾಯಕ ಸ್ಥಾನದಲ್ಲಿರುವುದರಿಂದ ಆರ್ಥಿಕವಾಗಿ ಉತ್ತಮ...

cmcup2026-kgfsmashershnaveen

ಕೆಜಿಎಫ್ ಸ್ಮಾಷರ್ಶ್ ತಂಡದ ಸಾರಥಿ ಟೆಕ್ಕಿ ನವೀನ್ ಯಶೋಗಾಥೆ..!

by admin
February 18, 2026
0

ನವೀನ್.. ಕೆಜಿಎಫ್ ಸ್ಮಾಷರ್ಶ್ ತಂಡದ ಸಾರಥಿ. cmcup2026-kgfsmashers team ಯಶಸ್ವಿ ವೃತ್ತಿಜೀವನದ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ಕ್ರೀಡಾ ಆಸಕ್ತಿಯನ್ನು ಸಮತೋಲನವಾಗಿ ಕಾಪಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಿಲ್ಲ. ಅದಕ್ಕೆ...

roopashekhar aesthetic attackers team owner

ನೊಂದವರ ಪಾಲಿನ ಆಶಾಕಿರಣ ರೂಪಾ ಶೇಖರ್- ಎಸ್ಥೆಟೆಕ್ ಅಟ್ಯಾಕರ್ಸ್ ತಂಡದ ಒಡತಿ..!

by admin
February 18, 2026
0

ರೂಪಾ ಶೇಖರ್ ಉದ್ಯಮಿ, ಯುವ ರಾಜಕಾರಣಿ ಎಸ್ಥೆಟೆಕ್ ಅಟ್ಯಾಕರ್ಸ್ ಫ್ರಾಂಚೈಸಿಯ ಒಡತಿ cmcup2026-aesthetic attackersteam ರಾಜಕಾರಣ, ರಾಜಕಾರಣಿಗಳು ಅಂದ್ರೆ ಮೂಗು ಮುರಿಯುವ ಈಗಿನ ಕಾಲಘಟ್ಟದಲ್ಲಿ ರಾಜಕಾರಣ ಎಂಬುದು...

atsattackers team owner narsimhamurthi

ಅಭ್ಯುದಯ ಟೆಕ್ನೋ ಸಲ್ಯೂಷನ್ಸ್ ಯಶಸ್ಸಿನ ರೂವಾರಿಗಳು ಎಸ್.ಜಿ. ನರಸಿಂಹಮೂರ್ತಿ ಮತ್ತು ಮೊಹಮ್ಮದ್ ಮುಸ್ತಫಾ ಎಂಬ ಜೊಡೆತ್ತುಗಳು

by admin
February 18, 2026
0

ಎಸ್.ಜಿ. ನರಸಿಂಹಮೂರ್ತಿ & ಮೊಹಮ್ಮದ್ ಮುಸ್ತಫಾ ಅಭ್ಯುಧಯ ಟೆಕ್ನೋ ಸಲ್ಯೂಷನ್ ಎಟಿಎಸ್ ಅಟ್ಯಾಕರ್ಸ್ ತಂಡದ ಮಾಲೀಕರು cmcup badminton 2026 -The ATS Attackers team ಐಟಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram