ಆಗಸ್ಟ್ .1ರಿಂದಲೇ ಬದಲಾಗಲಿದೆ ಎಟಿಎಂ ಹಣ ಹಿಂಪಡೆಯುವಿಕೆಯ ನಿಯಮ..!
ನವದೆಹಲಿ: ಆಗಸ್ಟ್ 1 ರಿಂದ ಎಟಿಎಂ ಹಣ ಹಿಂಪಡೆಯುವಿಕೆಯ ನಿಯಮ ಬದಲಾಗಲಿದೆ.. ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಗ್ರಾಹಕರಿಂದ ಹೆಚ್ಚುವರಿ ಹಣದ ವಸೂಲಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದು, ಆಗಸ್ಟ್ 1ರಿಂದಲೇ ಇದು ಜಾರಿಗೆ ಬರಲಿದೆ.. ಈ ನಯಮದ ಅನ್ವಯ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಬಾರಿ ಉಚಿತವಾಗಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು. ಇದು ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳನ್ನು ಒಳಗೊಂಡಿದೆ. ತಮ್ಮದಲ್ಲದ ಬ್ಯಾಂಕ್‌ನಿಂದ ಅಂದರೆ ಬೇರೆ ಬ್ಯಾಂಕ್‌ಗಳ ಎಟಿಎಂನಿಂದ ಹಣವನ್ನು ಹಿಂಪಡೆಯುವುದಾದರೆ ಮಹಾನಗರಗಳಲ್ಲಿ ಮೂರು ಬಾರಿ ಮಾತ್ರ ಅರ್ಹರಾಗಿದ್ದು, ಗ್ರಾಮೀಣ ಭಾಗದಲ್ಲಿ ಐದು ಬಾರಿ ಉಚಿತವಾಗಿ ಹಿಂಪಡೆಯುವಿಕೆಗೆ ಅರ್ಹರಾಗಿರುತ್ತಾರೆ.
RBI ನಿಂದ ಶೀಘ್ರವೇ ಡಿಜಿಟಲ್ ಕರೆನ್ಸಿ ಚಲಾವಣೆಗೆ ತರುವ ಕಾರ್ಯ – ಡೆಪ್ಯುಟಿ ಗವರ್ನರ್
ಒಂದು ವೇಳೆ ಇದನ್ನು ಮೀರಿ ವಹಿವಾಟು ನಡೆಸಿದರೆ ಪ್ರತಿಯೊಂದು ವಹಿವಾಟಿಗೆ ನೀವು ವಿತ್ ಡ್ರಾ ಮಾಡಿಕೊಂಡ ಹಣಕ್ಕಿಂತ ಹೆಚ್ಚುವರಿಯಾಗಿ 20 ರೂ.ಗಳು ಕಡಿತ ಆಗಲಿವೆ. ಹಿಂಪಡೆದುಕೊಂಡಿರುವ ಮೊತ್ತವನ್ನು ಪರಿಗಣಿಸದೆ ಬದಲಿಗೆ ಪ್ರತಿ ವಹಿವಾಟಿನ ಲೆಕ್ಕಾಚಾರ ಮಾಡಲಾಗುತ್ತದೆ. ಇದರ ಜತೆಗೆ ಬ್ಯಾಂಕುಗಳು ಹಣಕಾಸಿನ ಪ್ರತಿ ವಹಿವಾಟಿಗೆ ವಿನಿಮಯ ಶುಲ್ಕವನ್ನು ರೂ.15 ರಿಂದ ರೂ.17 ಕ್ಕೆ ಏರಿಸಿದೆ. ಎಲ್ಲಾ ಕೇಂದ್ರಗಳಲ್ಲಿ ಹಣಕಾಸುಯೇತರ ವಹಿವಾಟುಗಳಿಗೆ ರೂ.5 ರಿಂದ ರೂ.6 ಕ್ಕೆ ಹೆಚ್ಚಿಸಲಾಗಿದೆ. ಗ್ರಾಹಕರು ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ಮೀರಿದರೆ, ಜನವರಿ 1, 2022 ರಿಂದ ಜಾರಿಗೆ ಬರುವಂತೆ ಪ್ರತಿ ವಹಿವಾಟಿಗೆ ರೂ 20 ರ ಬದಲು ರೂ 21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.








