ನವದೆಹಲಿ: ಯುಎಸ್ ಮತ್ತು ಇತರ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮುಕ್ತಾಯಗೊಳಿಸುವತ್ತ ಭಾರತ ಗಮನ ಹರಿಸಬೇಕಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಸಿಐಐ ಕಾರ್ಯಕ್ರಮದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋವಿಡ್ -19 ಸಾಂಕ್ರಾಮಿಕ ಪರಿಣಾಮದಿಂದಾಗಿ ಆರ್ಥಿಕತೆಯನ್ನು ಹಿಮ್ಮೆಟ್ಟಿಸಲು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಹೆಚ್ಚಿಸವ ಅಗತ್ಯವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪರೋಕ್ಷವಾಗಿ ಕೇಂದ್ರ ಸರಕಾರಕ್ಕೆ ಕಿವಿಮಾತು ಹೇಳಿದರು.
ಸಿಐಐ ಕಾರ್ಯಕ್ರಮವೊಂದರಲ್ಲಿ ಇಂಡಿಯಾ ಇಂಕ್ ಅನ್ನುದ್ದೇಶಿಸಿ ಮಾತನಾಡಿದ ದಾಸ್, ಖಾಸಗಿ ಮತ್ತು ಸಾರ್ವಜನಿಕ ವಲಯಗಳು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದು ಬೃಹತ್ ಹೂಡಿಕೆಯ ಅಗತ್ಯವಿದೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಕಠಿಣ ನಿಲುವಿನ ಮೂಲಕ ಒತ್ತಡವನ್ನು ತೆಗೆದುಕಕೊಂಡು, ಸವಾಲುಗಳನ್ನು ಎದುರಿಸಲು ಬಂಡವಾಳವನ್ನು ಸಂಗ್ರಹಿಸಲು ಬ್ಯಾಂಕುಗಳಿಗೆ ಸಲಹೆ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಕೃಷಿ ಸುಧಾರಣೆಗಳು ಹೊಸ ಅವಕಾಶಗಳನ್ನು ತೆರೆದಿವೆ ಎಂದು ತಿಳಿಸಿದ ಆರ್‌ಬಿಐ ಗವರ್ನರ್ , ಕೃಷಿ ಕ್ಷೇತ್ರವು ಹೊಸ ಅಯಮಿನಿಂದ ಉಜ್ವಲವಾಗಿ ಹೊರಹೊಮ್ಮುತ್ತಿದೆ. ಕೃಷಿ ಆದಾಯದಲ್ಲಿ ನಿರಂತರ ಹೆಚ್ಚಳಕ್ಕೆ ಭಾರತಕ್ಕೆ ನೀತಿಗಳ ಅಗತ್ಯವಿದೆ ಎಂದರು. ಇದಕ್ಕೆ ಹೊಸ ಕೃಷಿ ನೀತಿ ತರುವ ಅಗತ್ಯವನ್ನು ತಿಳಿಸಿದರು.
ವಿದೇಶಿ ವಿನಿಮಯ ದರಕ್ಕೆ ಸಂಬಂಧಿಸಿದಂತೆ, ಆರ್‌ಬಿಐಗೆ ರೂಪಾಯಿಗೆ ನಿಗದಿತ ಗುರಿ ಇಲ್ಲ ಆದರೆ ಅನಗತ್ಯ ಚಂಚಲತೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ದಾಸ್ ಹೇಳಿದ್ದಾರೆ.
ಒಟ್ಟಿನಲ್ಲಿ ಆತ್ಮ ನಿರ್ಭರ ಭಾರತದ ಅಂಗವಾಗಿ ಗ್ಲೋಬಲ್ ಟು ಲೋಕಲ್ ಮತ್ತು ಸ್ವದೇಶಿಕರಣದ ಮೂಲಕ ಮೂಲಭೂತ ಸೌಕರ್ಯ ಮತ್ತು ಕೃಷಿ ವಲಯದ ಸುಧಾರಣೆಗೆ ಒಲವು ವ್ಯಕ್ತಪಡಿಸಿದರು.








