ರೆಪೊ ರೇಟ್ ಹೆಚ್ಚಿಸಿದ RBI – ದುಬಾರಿಯಾಗಲಿದೆ ಗೃಹ, ವಾಹನ ಸಾಲ…
ಹಣದುಬ್ಬರ ಏರಿಕೆಯಿಂದ ಆತಂಕಗೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸಿದೆ. ಇದರೊಂದಿಗೆ ರೆಪೋ ದರ ಶೇ.5.40 ರಿಂದ ಶೇ.5.90ಕ್ಕೆ ಏರಿಕೆಯಾಗಿದೆ. ರೇಪೋ ರೇಟ್ ಏರಿಕೆಯಿಂದ ಗೃಹ ಸಾಲದಿಂದ ಹಿಡಿದು ವಾಹನ ಮತ್ತು ವೈಯಕ್ತಿಕ ಸಾಲಗಳವರೆಗೆ ಎಲ್ಲವೂ ಸಹ ದುಬಾರಿಯಾಗಲಿದ್ದು, ನೀವು ಹೆಚ್ಚು EMI ಪಾವತಿಸಬೇಕಾಗುತ್ತದೆ.
ಬಡ್ಡಿದರಗಳನ್ನು ನಿರ್ಧರಿಸಲು ಸೆಪ್ಟೆಂಬರ್ 28 ರಿಂದ ಹಣಕಾಸು ನೀತಿ ಸಮಿತಿಯ ಸಭೆ ನಡೆಯುತ್ತಿತ್ತು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಡ್ಡಿದರ ಹೆಚ್ಚಳವನ್ನ ಘೋಷಿಸಿದ್ದಾರೆ. ಈ ಹಿಂದೆ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಬಡ್ಡಿದರವನ್ನು ಶೇ.4.90ರಿಂದ ಶೇ.5.40ಕ್ಕೆ ಹೆಚ್ಚಿಸಲಾಗಿತ್ತು.

ಪ್ರತಿ ಎರಡು ತಿಂಗಳಿಗೊಮ್ಮೆ ಹಣಕಾಸು ನೀತಿ ಸಭೆ ನಡೆಯುತ್ತದೆ. ಈ ಆರ್ಥಿಕ ವರ್ಷದ ಮೊದಲ ಸಭೆ ಏಪ್ರಿಲ್‌ನಲ್ಲಿ ನಡೆದಿತ್ತುಅದರಲ್ಲಿ RBI ರೆಪೊ ದರವನ್ನು 4% ನಲ್ಲಿ ಸ್ಥಿರವಾಗಿ ಇರಿಸಿಲಾಗಿತ್ತು. ಆದರೆ ಆರ್ ಬಿಐ ಮೇ 2 ಮತ್ತು 3ರಂದು ತುರ್ತು ಸಭೆ ಕರೆದು ರೆಪೋ ದರವನ್ನು ಶೇ.0.40ರಿಂದ ಶೇ.4.40ಕ್ಕೆ ಏರಿಸಲಾಗಿತ್ತು.
22 ಮೇ 2020 ರ ನಂತರ ರೆಪೋ ದರದಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ. ಇದಾದ ಬಳಿಕ ಜೂನ್ 6ರಿಂದ 8ರವರೆಗೆ ನಡೆದ ಸಭೆಯಲ್ಲಿ ರೆಪೊ ದರವನ್ನು ಶೇ.0.50ರಷ್ಟು ಹೆಚ್ಚಿಸಲಾಗಿತ್ತು. ಇದು ರೆಪೊ ದರವನ್ನು 4.40% ರಿಂದ 4.90% ಕ್ಕೆ ಹೆಚ್ಚಿಸಿದೆ. ನಂತರ ಆಗಸ್ಟ್‌ನಲ್ಲಿ 0.50% ಹೆಚ್ಚಿಸಲಾಯಿತು, ಅದು 5.40% ತಲುಪಿತು. ಈಗ ಬಡ್ಡಿ ದರಗಳು 5.90% ಕ್ಕೆ ಏರಿದೆ.
RBI May Increase Repo Rate, RBI Monetary Policy Meeting








