ಹೊಸದಿಲ್ಲಿ, ಜೂನ್ 6 : ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ನಿಷೇಧದ ಅವಧಿಗೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್’ಬಿಐ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸುಪ್ರೀಂಕೋರ್ಟ್ನಲ್ಲಿ ಆರ್’ಬಿಐ ಕೊರೊನಾವೈರಸ್ ಲಾಕ್ಡೌನ್ ಹಿನ್ನಲೆಯಲ್ಲಿ ಬ್ಯಾಂಕುಗಳ ಎಲ್ಲಾ ರೀತಿಯ ಸಾಲಗಳ ಮೇಲಿನ ಇಎಂಐ ವಿಸ್ತರಣೆ ಮಾಡಿವೆ, ಆದರೆ ಬಡ್ಡಿ ಮನ್ನಾ ಮಾಡಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಆರ್’ಬಿಐ, ಸರ್ವೋಚ್ಚ ನ್ಯಾಯಾಲಯಕ್ಕೆ ಮಹತ್ವದ ಪ್ರಮಾಣಪತ್ರ ಸಲ್ಲಿಸಿದೆ.
ಕೊರೋನಾ ಕಾರಣದಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ಗಳ ಗ್ರಾಹಕರಿಗೆ ಸಾಲದ ಕಂತು ಪಾವತಿಸಲು ಅವಧಿಯನ್ನು ಮುಂದೂಡಿ ಅವಕಾಶ ನೀಡಿದೆ. ಆದರೆ ಸಾಲಗಳ ಮೇಲಿನ ಈ ಅವಧಿಯ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್’ಬಿಐ ಕೋರ್ಟ್ ಗೆ ತಿಳಿಸಿದ್ದು, ಒಂದು ವೇಳೆ ಹಾಗೆ ಮಾಡಿದರೆ ಬ್ಯಾಂಕ್ಗಳ ಆರ್ಥಿಕ ಪರಿಸ್ಥಿತಿ ತುಂಬಾ ತಳ ಮಟ್ಟಕ್ಕೆ ಕುಸಿಯಲಿದೆ. ಇದರಿಂದಾಗಿ ಒಟ್ಟಾರೆ 2.01 ಲಕ್ಷ ಕೋಟಿ ರೂಪಾಯಿ ಅಥವಾ 1% ಭಾರತದ ಜಿಡಿಪಿಯಷ್ಟು ಕಳೆದುಕೊಳ್ಳಬಹುದು ಎಂದು ತಿಳಿಸಿದೆ.
ಹೀಗಾಗಿ ತಾನು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್ಬಿಐ ತನ್ನ ಪ್ರಮಾಣ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಅಷ್ಟೇ ಅಲ್ಲ ನಾವು ಕೇವಲ ಇಎಂಐ ಪಾವತಿಯನ್ನು ಮುಂದೂಡಲು ಅವಕಾಶ ನೀಡಿದ್ದೇವೆ ಹೊರತು ಸಾಲಮನ್ನಾ ಮಾಡಿಲ್ಲ ಎಂದು ಆರ್ಬಿಐ ಒತ್ತಿ ಹೇಳಿದೆ








