RCB | ಫಾಫ್ BIGest mistake
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ನೇ ಆವೃತ್ತಿಯಿಂದ ಹೊರ ಬಿದ್ದಿದೆ. ಫೈನಲ್ ಹಾದಿಯಲ್ಲಿ ಆರ್ ಸಿಬಿ ತಂಡ ಎಡವಿದ್ದು, ಸತತ ಮೂರನೇ ಬಾರಿಗೆ ಪ್ಲೇ ಆಫ್ಸ್ ಗೆ ಆಟ ಮುಗಿಸಿದೆ.
ಅಹ್ಮದಾಬಾದ್ ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳು ವಿಕೆಟ್ ಗಳಿಂದ ಸೋಲು ಅನುಭವಿಸಿದೆ. ಆ ಮೂಲಕ ಚೊಚ್ಚಲ ಕಪ್ ಗೆಲ್ಲುವ ಆರ್ ಸಿಬಿಯ ಕನಸು ಭಗ್ನಗೊಂಡಿದೆ. ಆದ್ರೆ ಈ ಪಂದ್ಯದಲ್ಲಿ ಆರ್ ಸಿಬಿ ಸೋಲಿಗೆ ನಾಯಕ ಫಾಫ್ ಡುಪ್ಲಸಿಸ್ ನಿರ್ಧಾರಗಳು ಕೂಡ ಪ್ರಮುಖ ಕಾರಣವಾಗಿವೆ.
ಹೌದು..!! ಟೂರ್ನಿಯ ಆರಂಭಕ್ಕೂ ಮುನ್ನಾ ಫಾಫ್ ಡುಪ್ಲಸಿಸ್ ಅವರನ್ನ ಬೆಂಗಳೂರು ತಂಡದ ನಾಯಕರನ್ನಾಗಿ ಘೋಷಣೆ ಮಾಡಿದಾಗ ತಂಡಕ್ಕೆ ಹೊಸ ಜೋಷ್ ಬಂದಿತ್ತು. ಹೊಸ ಕೋಚ್ ಸಂಜಯ್ ಬಂಗಾರ್ ಜೊತೆ ಸೇರಿ ಫಾಫ್ ಆರ್ ಸಿಬಿಗೆ ಚೊಚ್ಚಲ ಕಪ್ ಗೆಲ್ಲಿಸಿಕೊಡುತ್ತಾರೆ ಅಂತಾ ಹಿರಿಯ ಕ್ರಿಕೆಟಿಗರು ಕೂಡ ಅಂದಾಜಿಸಿದ್ದರು.
ಅದರಲ್ಲೂ ಲೀಗ್ ಹಂತದ ಪಂದ್ಯಗಳಲ್ಲಿ ಫಾಫ್ ನಾಯಕತ್ವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಪ್ಲೇಯಿಂಗ್ ಇಲೆವೆನ್ ಆಯ್ಕೆ, ಬೌಲರ್ ಗಳ ಬದಲಾವಣೆ, ಫೀಲ್ಡಿಂಗ್ ಸೆಟ್ಟಿಂಗ್ ಹೀಗೆ ಎಲ್ಲಾ ವಿಚಾರಗಳಲ್ಲಿಯೂ ಡುಪ್ಲಸಿಸ್ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದರು. ಅದರಲ್ಲೂ ಫಾಫ್ ಅವರ ಪ್ಲೇಯಿಂಗ್ ಇಲೆವೆನ್ ಆಯ್ಕೆ ಎಲ್ಲರ ಗಮನ ಸೆಳೆದಿತ್ತು. ಯಾಕಂದರೇ ಫಾಫ್ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಮುಂದಾಗಲೇ ಇಲ್ಲ. ಬದಲಿಗೆ ಆಟಗಾರರಿಗೆ ಸತತ ಅವಕಾಶಗಳನ್ನು ನೀಡುತ್ತಾ ಬೂಸ್ಟ್ ಮಾಡಿದರು.
ಹೀಗೆ ನಾಯಕತ್ವದಲ್ಲಿ ಎಲ್ಲರ ಗಮಸ ಸೆಳೆದಿದ್ದ ಫಾಫ್ ಡುಪ್ಲಸಿಸ್.. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಎಡವಿದ್ರು.
ರಾಜಸ್ಥಾನ್ ವಿರುದ್ಧ ಫಾಫ್ ಮಾಡಿದ ಮೊದಲ ಬಿಗ್ ಮಿಸ್ಟೇಕ್ ಅಂದ್ರೆ ಅದು 14 ನೇ ಓವರ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಔಟ್ ಆದಾಗ ದಿನೇಶ್ ಕಾರ್ತಿಕ್ ಬದಲಿಗೆ ಮಹಿಪಾಲ್ ಅವರನ್ನ ಬ್ಯಾಟಿಂಗ್ ಗೆ ಕಳುಹಿಸಿದ್ದು.
ಹೌದು..!!
ದಿನೇಶ್ ಕಾರ್ತಿಕ್ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಾಕಷ್ಟು ಪಂದ್ಯಗಳಲ್ಲಿ ಸಂಕಷ್ಟದ ಸ್ಥಿತಿಯಲ್ಲಿ ಬಂದ ಹೊಸಬರ ಜೊತೆ ಗೂಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಜೊತೆಗೆ ದಿನೇಶ್ ಫಾರ್ಮ್ ನಲ್ಲಿ ಕೂಡ ಇದ್ದರು. ಹೀಗಿದ್ದಾಗ ಯಾವುದೇ ತಂಡದ ಪರ ಫಾರ್ಮ್ ನಲ್ಲಿರುವ ಆಟಗಾರ ಹೆಚ್ಚು ಎಸೆತಗಳನ್ನು ಎದುರಸಬೇಕು. ಫಾರ್ಮ್ ನಲ್ಲಿರುವ ಆಟಗಾರ ಕೂಡ ಅದನ್ನೇ ನಿರೀಕ್ಷೆ ಮಾಡುತ್ತಾರೆ. ಆದ್ರೆ ಫಾಫ್ ಡುಪ್ಲಸಿಸ್ ಅದಕ್ಕೆ ಅವಕಾಶ ಕೊಡಲೇ ಇಲ್ಲ.
ಆರ್ ಸಿಬಿ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಔಟ್ ಆದ್ರು. ಆಗ ಬೆಂಗಳೂರು ತಂಡಕ್ಕೆ ಉಳಿದಿದ್ದದ್ದು ಇನ್ನೂ ಕೇವಲ ಆರು ಓವರ್ ಗಳು ಮಾತ್ರ. ಆಗ ಆರ್ ಸಿಬಿ ತಂಡದ ಸ್ಕೋರ್ 111 ರನ್. ಇಲ್ಲಿ ದಿನೇಶ್ ಕಾರ್ತಿಕ್ ಅವರ ಅನುಭವ ತಂಡಕ್ಕೆ ಬೇಕಾಗಿತ್ತು. ಆದ್ರೆ ಇಲ್ಲಿ ಫಾಫ್ ದಿನೇಶ್ ಬದಲಿಗೆ ಮಹಿಪಾಲ್ ಲೋಮ್ರೋರ್ ಅವರನ್ನ ಕಳುಹಿಸಿದರು. ಈ ಐಡಿಯಾ ವರ್ಕ್ ಆಗಲಿಲ್ಲ. 14 ನೇ ಓವರ್ ನಲ್ಲಿ ಬಂದ ಮಹಿಪಾಲ್ 10 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದರು. ಒಂದು ವೇಳೆ ಮಹಿಪಾಲ್ ಬದಲಿಗೆ ದಿನೇಶ್ ಕಾರ್ತಿಕ್ ಕ್ರೀಸ್ ಗೆ ಬಂದಿದ್ದರೇ ದೆತ್ ಓವರ್ ಗಳಲ್ಲಿ ಆರ್ ಸಿಬಿ ಕೊಲ್ಯಾಪ್ಸ್ ಆಗುತ್ತಿರಲಿಲ್ಲ. ಜೊತೆಗೆ ದಿನೇಶ್ ಕಾರ್ತಿಕ್ ಗೆ ಪಿಚ್ ಮರ್ಮ ಅರಿಯಲು ಸಹಾಯವಾಗುತ್ತಿತ್ತು. ಆಗ ಕೊನೆಯ ಓವರ್ ಗಳಲ್ಲಿ ದಿನೇಶ್ ಅಬ್ಬರಿಸಬಹುದಿತ್ತು. ಆದ್ರೆ ಇಲ್ಲಿ ಫಾಫ್ ನಿರ್ಧಾರ ಬೆಂಗಳೂರು ತಂಡ ದುಬಾರಿ ಆಗಿದ್ದು ಮಾತ್ರವಲ್ಲದೇ ಪಂದ್ಯದ ಸೋಲಿಗೂ ಪ್ರಮುಖ ಕಾರಣವಾಗಿದೆ.rcb-faf-bigest-mistake