ಡೆಲ್ಲಿ ವಿರುದ್ಧ ಆರ್ ಸಿಬಿ ಗೆಲುವಿಗೆ ಫಾಫ್ ಕಾರಣ
ಆರ್ ಸಿಬಿಗೆ ಇವತ್ತು ತುಂಬಾ ವಿಶೇಷವಾದ ಪಂದ್ಯವಾಗಿದೆ. ಯಾಕಂದರೇ ಯಾವುದೇ ತಂಡವಿರಲಿ ಸಾಕಷ್ಟು ಹಿನ್ನಡೆ ಅನುಭವಿಸಿದ ಬಳಿಕ ಕಂ ಬ್ಯಾಕ್ ಮಾಡೋದು ತೀರಾ ಕಡಿಮೆ.
ಆದ್ರೆ ಆರ್ ಸಿಬಿ ಕಮ್ ಬ್ಯಾಕ್ ಮಾಡಿ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ಆರ್ ಸಿಬಿಯ ಬ್ಯಾಟರ್ ದಿನೇಶ್ ಕಾರ್ತಿಕ್ ಖುಷಿ ಹಂಚಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಇನ್ನೇನು ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲೋದು ಪಕ್ಕಾ ಎನ್ನುವಂತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದ್ರೆ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ ಬೆಂಗಳೂರು ತಂಡ ಡೆಲ್ಲಿ ತಂಡದ ಕೈಯಲ್ಲಿದ್ದ ಗೆಲುವವನ್ನ ಕಿತ್ತುಕೊಂಡರು.
ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡಕ್ಕೆ ಟಾಪ್ ಆರ್ಡರ್ ಬ್ಯಾಟರ್ ಗಳು ಕೈ ಕೊಟ್ಟರು. 70 – 80 ರನ್ ಗಳಿಗೆ ತಂಡ ಐದು ವಿಕೆಟ್ ಕಳೆದುಕೊಂಡಿತ್ತು.
ಇಂತಹ ಸಂಕಷ್ಟದಲ್ಲಿ ದಿನೇಶ್ ಕಾರ್ತಿಕ್, ಶಹಬ್ಬಾಸ್ ಅಹ್ಮದ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಅಲ್ಲದೇ ಡೆಲ್ಲಿ ತಂಡಕ್ಕೆ ಗೆಲ್ಲಲು 190 ರನ್ ಗಳ ಟಾರ್ಗೆಟ್ ನೀಡಿದರು.
ಈ ಗುರಿ ಬೆನ್ನಟ್ಟಿದ ಡೆಲ್ಲಿಗೆ ಉತ್ತಮ ಆರಂಭ ಸಿಕ್ತು. ವಾರ್ನರ್ ಅರ್ಧ ಶತಕ ಸಿಡಿಸಿದ್ರು. ಆದ್ರೆ ಪಂದ್ಯದ 12ನೇ ಓವರ್ ನಲ್ಲಿ ಆರ್ ಸಿಬಿ ಬೌಲರ್ ಗಳು ಕಂ ಬ್ಯಾಕ್ ಮಾಡಿದರು. ಅಲ್ಲದೇ ಡೆಲ್ಲಿ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ತೆಗೆದು ಪಂದ್ಯವನ್ನು ಗೆದ್ದುಕೊಂಡರು.
ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿಗೆ ಪ್ರಮುಖ ಕಾರಣವಾಗಿದ್ದು, ದಿನೇಶ್ ಕಾರ್ತಿಕ್ ಅವರ ಪ್ರದರ್ಶನ. ಅವರು 34 ಎಸೆತಗಳಲ್ಲಿ 66 ರನ್ ಚಚ್ಚಿ ತಂಡಕ್ಕೆ ನೆರವಾದರು.
ಇನ್ನು ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ ನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ತಂಡದ ಸಾಂಘಿಕ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ ಸಿಬಿಗೆ ಇವತ್ತು ತುಂಬಾ ವಿಶೇಷವಾದ ಪಂದ್ಯವಾಗಿದೆ. ಯಾಕಂದರೇ ಯಾವುದೇ ತಂಡವಿರಲಿ ಸಾಕಷ್ಟು ಹಿನ್ನಡೆ ಅನುಭವಿಸಿದ ಬಳಿಕ ಕಂ ಬ್ಯಾಕ್ ಮಾಡೋದು ತೀರಾ ಕಡಿಮೆ. ಆದ್ರೆ ಆರ್ ಸಿಬಿ ಕಮ್ ಬ್ಯಾಕ್ ಮಾಡಿ ಪಂದ್ಯವನ್ನು ಗೆದ್ದುಕೊಂಡಿದೆ. ನಾವು ಮೊದಲು ಟಾಸ್ ಸೋತೆವು.
ನಂತರ ಬೇಗ ವಿಕೆಟ್ ಗಳನ್ನು ಕಳೆದುಕೊಂಡೆವು. ಆದ್ರೂ ಉತ್ತಮ ಮೊತ್ತವನ್ನು ಗಳಿಸಿ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿದ್ದೇವು. ಇದಾದ ನಂತರ ಬೌಲಿಂಗ್ ನಲ್ಲಿ 12ನೇ ಓವರ್ ವರೆಗೆ ಪಂದ್ಯ ಎದುರಾಳಿಗಳ ಕೈಯಲ್ಲಿತ್ತು. ಆ ನಂತರ ನಮ್ಮ ಬೌಲರ್ ಗಳು ಕಂ ಬ್ಯಾಕ್ ಮಾಡಿದರು. ಇದಕ್ಕೆ ಪ್ರಮುಖ ಕಾರಣ ಫಾಫ್ ನಾಯಕತ್ವ. ಅವರ ಕ್ಯಾಪ್ಟನ್ಸಿ ಮತ್ತು ತಂತ್ರಗಳಿಂದಲೇ ನಾವು ಗೆಲುವು ಸಾಧಿಸಿದ್ದೇವೆ ಎಂದಿದ್ದಾರೆ. RCB Faf is responsible for the RCB win over Delhi