RCB ಫೈನಲ್ ಗೆ ಬರೋದು ಪಕ್ಕಾ.. ಹೀಗೆ ಅಂತೀರಾ…?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಫೈನಲ್ ಗೆ ಬರೋದು ಪಕ್ಕಾ ಎಂದು ಆರ್ ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅರ್ರೆ ಇದೇನು ಆರ್ ಸಿಬಿ ಇನ್ನೂ ಪ್ಲೇ ಆಫ್ಸ್ ಗೆ ಹೋಗಿಲ್ಲ. ಮತ್ತೆ ಪೈನಲ್ ಗೆ ಹೇಗೆ ಹೋಗುತ್ತೆ ಅಂತಾ ಪ್ರಶ್ನೆ ನಿಮ್ಮಲ್ಲಿ ಇದ್ರೆ ಇದಕ್ಕೆ ಉತ್ತರ ಗ್ರೀನ್ ಜೆರ್ಸಿಯಲ್ಲಿ ಗೆಲುವು ಸಾಧಿಸಿದ್ದು..
ಹೌದು..! ಇದಕ್ಕೂ ಮುನ್ನಾ ಆರ್ ಸಿಬಿ ಹಸಿರು ಜೆರ್ಸಿಯಲ್ಲಿ 10 ಪಂದ್ಯಗಳನ್ನಾಡಿದೆ. ಇದರಲ್ಲಿ ಎರಡು ಪಂದ್ಯಗಳನ್ನ ಮಾತ್ರ ಗೆದ್ದಿದೆ.
ಇದೀಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಿದೆ.
ಈ ಹಿನ್ನೆಲೆಯಲ್ಲಿ ಆರ್ ಸಿಬಿ ಪ್ಲೇ ಆಫ್ಸ್ ಅವಕಾಶಗಳ ಬಗ್ಗೆ ಅಭಿಮಾನಿಗಳು ಹೊಸ ವಾದವನ್ನು ಮಂಡಿಸುತ್ತಿದ್ದಾರೆ.
ಈ ಹಿಂದೆ ಬೆಂಗಳೂರು ತಂಡ ಗ್ರೀನ್ ಜೆರ್ಸಿಯಲ್ಲಿ ಗೆಲುವು ಸಾಧಿಸಿದ್ದಾಗ ಫೈನಲ್ ಪ್ರವೇಶಿಸಿತ್ತು.

ಹೀಗಾಗಿ ಈ ಬಾರಿಯೂ ತಂಡ ಫೈನಲ್ ಪ್ರವೇಶಿಸುತ್ತದೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಈ ಬಾರಿ ಫಾಫ್ ನಾಯಕತ್ವದಲ್ಲಿ ಕಪ್ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ.
RCB, 2011 ರ ಋತುವಿನಲ್ಲಿ ಡೇನಿಯಲ್ ವೆಟ್ಟೋರಿ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಹಸಿರು ಜೆರ್ಸಿಯಲ್ಲಿ ಮೈದಾನಕ್ಕೆ ಇಳಿದಿತ್ತು.
ಆ ಪಂದ್ಯದಲ್ಲಿ ಜಯ ಸಾಧಿಸಿ ಪೈನಲ್ ಪ್ರವೇಶಿಸಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2016ರಲ್ಲಿ ಆರ್ ಸಿಬಿ ಗುಜರಾತ್ ಲಯನ್ ವಿರುದ್ಧ ಗೆಲುವು ಸಾಧಿಸಿತ್ತು. ಆಗಲೂ ತಂಡ ಫೈನಲ್ ಪ್ರವೇಶಿಸಿತ್ತು.
ಆದ್ರ ಫೈನಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು.
ಇದೀಗ ಫಾಫ್ ನಾಯಕತ್ವದಲ್ಲಿ ಆರ್ ಸಿಬಿ ಮತ್ತೆ ಗ್ರೀನ್ ಜೆರ್ಸ್ಇಯಲ್ಲಿ ತಂಡ ಜಯ ಸಾಧಿಸಿದ್ದು, ಫೈನಲ್ ಪ್ರವೇಶಿಸುತ್ತಾ ಕಾದು ನೋಡಬೇಕಾಗಿದೆ. rcb-green-jersey-signals-bengaluru-team-entering-finals








