RCB | ಸಿರಾಜ್ ತುಂಬಾ ದುರದೃಷ್ಟವಂತ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಸಿರಾಜ್ ಅತ್ಯಂತ ಉತ್ಸಾಹಿ ಕ್ರಿಕೆಟಿಗ ಎಂದು ಹೆಸ್ಸನ್ ಹೇಳಿದ್ದಾರೆ. ಸಾಮಾನ್ಯವಾಗಿ ಆಟಗಾರರು ಅತ್ಯುತ್ತಮ ಫಾರ್ಮ್ನಲ್ಲಿರುವಾಗ ಉತ್ಸುಕರಾಗಿ ಕಾಣುತ್ತಾರೆ.
ಆದರೆ ಸಿರಾಜ್ ಮಾತ್ರ ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ ಸದಾ ಒಂದೇ ರೀತಿಯಲ್ಲಿರುತ್ತಾರೆ ಎಂದಿದ್ದಾರೆ ಮೈಕ್.
ಸಿರಾಜ್ ಮೊದಲು ಆರ್ ಸಿಬಿ ಸೇರಿಕೊಂಡಾಗ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದ್ರೆ ಹಠದೊಂದಿಗೆ ಸಿರಾಜ್ ತಂಡದ ಪ್ರಮುಖ ಬೌಲರ್ ಆಗಿ ಬೆಳೆಯುತ್ತಿದ್ದಾರೆ.
ಅಲ್ಲದೇ ಟೀಂ ಇಂಡಿಯಾದ ಪರ ಸಿರಾಜ್ ಉತ್ತಮ ಬೌಲರ್ ಆಗಿದ್ದಾರೆ. ಆದ್ರೂ ಆತ ದುರದೃಷ್ಟವಂತ ಎಂದು ನನಗೆ ಅನಿಸುತ್ತದೆ..
ಏಕೆಂದರೆ ಅವರಿಗೆ ಭಾರತದ ಪರವಾಗಿ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ . ಸಿರಾಜ್ ಹೆಚ್ಚಾಗಿ ಬೆಂಚಿಗೆ ಸೀಮಿತವಾಗುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.
ಆದಾಗ್ಯೂ, ಕೆಲವು ಭಾರತೀಯ ವೇಗಿಗಳು ತಮ್ಮ ವೃತ್ತಿಜೀವನದ ಅಂತ್ಯವನ್ನು ತಲುಪಿದ್ದಾರೆ.
ಮುಂದಿನ ದಿನಗಳಲ್ಲಿ ಸಿರಾಜ್ ಭಾರತೀಯ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ ಎಂದು ಹೆಸ್ಸನ್ ಭವಿಷ್ಯ ನುಡಿದಿದ್ದಾರೆ.









