FAF | ನಾಯಕನಾಗಿ ಫಾಫ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ..?
ದಕ್ಷಿಣ ಆಫ್ರಿಕಾದ ಸ್ಟಾರ್ ಫಾಫ್ ಡುಪ್ಲೇಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಆ ಮೂಲಕ ಆರ್ ಸಿಬಿಯಲ್ಲಿ ಹೊರ ಎರಾ ಶುರುವಾಗಿದೆ.
RCB ಅನ್ ಬಾಕ್ಸ್ ಅದ್ದೂರಿ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದ ನಾಯಕರನ್ನ ಘೋಷಣೆ ಮಾಡಿದೆ.
ಹಾಗಾದ್ರೆ ಫಾಫ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ..?
ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿರುವ ಫಾಫ್ ಡುಪ್ಲಸಸ್, 115 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 81 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು 40 ಟಿ- 20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದು, 25 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಇದು ನಾಯಕನಾಗಿ ಫಾಫ್ ದಾಖಲೆಯಾಗಿದೆ.
ಇನ್ನು ಐಪಿಎಲ್ ನಲ್ಲಿ ಫಾಫ್ 100 ಪಂದ್ಯಗಳನ್ನು ಆಡಿದ್ದು, 35ರ ಸರಾಸರಿಯಲ್ಲಿ 2935 ರನ್ ಕಲೆ ಹಾಕಿದ್ದಾರೆ. 22 ಅರ್ಧಶತಗಳನ್ನು ದಾಖಲಿಸಿದ್ದಾರೆ.
ಅಂದಹಾಗೆ ಐಪಿಎಲ್ ನಲ್ಲಿ 100 ಪಂದ್ಯಗಳನ್ನಾಡಿರುವ ಫಾಫ್ ಇದೇ ಮೊದಲ ಬಾರಿಗೆ ಒಂದು ತಂಡದ ನಾಯಕತ್ವ ವಹಿಸಿದ್ದಾರೆ. ಹೀಗಾಗಿ ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
RCB New captin faf du plessis Track record









