RCB vs GT Match | ಯುವಕರಿಗೆ ಕೋಕ್.. ಅನುಭವಿ ಇನ್ RCB ಪ್ಲೇಯಿಂಗ್ 11
ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.
ಪ್ಲೇ ಆಫ್ಸ್ ದೃಷ್ಠಿಯಿಂದ ಬೆಂಗಳೂರು ತಂಡಕ್ಕೆ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಹೀಗಾಗಿ ಗುಜರಾತ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಆರ್ ಸಿ ಬಿ ತಂಡ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಇಂದು ಮಧ್ಯಾಹ್ನ 3 : 30 ಕ್ಕೆ ಪಂದ್ಯ ನಡೆಯಲಿದೆ.
ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಆರ್ ಸಿಬಿಯಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ.
ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ವಿಭಾಗ ದೊಡ್ಡ ಸಮಸ್ಯೆಯಾಗಿದೆ.
ತಂಡದಲ್ಲಿ ಘಟಾನುಘಟಿ ಬ್ಯಾಟರ್ ಗಳು ಇದ್ದರೂ ಬ್ಯಾಡ್ ಫಾರ್ಮ್ ತಂಡವನ್ನು ಕಾಡುತ್ತಿದೆ.
ಮುಖ್ಯವಾಗಿ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.
ಆರ್ ಸಿಬಿಯ ಬ್ಯಾಟಿಂಗ್ ನಲ್ಲಿ ದಿನೇಶ್ ಕಾರ್ತಿಕ್, ಶಹಬ್ಬಾಸ್ ಅಹ್ಮದ್ ಹೊರತು ಪಡಿಸಿ ಇನ್ನುಳಿದವರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.
ಮುಖ್ಯವಾಗಿ ನಾಯಕ ಫಾಫ್ ಡು ಪ್ಲೆಸಿಸ್ ಹೊರತು ಪಡಿಸಿದರೆ ಆರ್ಸಿಬಿಯ ಟಾಪ್ ಆರ್ಡರ್ ಕಂಪ್ಲೀಟ್ ಫ್ಲಾಪ್ ಆಗಿದೆ.
ವಿರಾಟ್ ಮತ್ತು ಮ್ಯಾಕ್ಸ್ ವೆಲ್ ವೈಫಲ್ಯ ಮಿಡಲ್ ಆರ್ಡರ್ಗೆ ಸಮಸ್ಯೆ ತಂದಿದೆ. ಕಳೆದ ಪಂದ್ಯದಲ್ಲಿ ಆಡಿದ ರಜತ್ ಪಾಟಿದಾರ್ ಈ ಪಂದ್ಯದಲ್ಲಿ ಮಹಿಪಾಲ್ ಲೊಮ್ರೊರ್ ಗೆ ಅವಕಾಶ ಮಾಡಿಕೊಡಬೇಕಿದೆ.
ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ಸುಯೇಶ್ ಪ್ರಭುದೇಸಾಯಿ ಕೂಡ ಆರಂಭದಲ್ಲಿ ಆಡಿದ ಹಾಗೇ ಆಡುತ್ತಿಲ್ಲ.
ಆರ್ ಸಿಬಿ ಬ್ಯಾಟಿಂಗ್ ನಲ್ಲಿ ಮತ್ತೊಂದು ಸಮಸ್ಯೆ ಎಂದರೇ ಅದು ಅನಾನುಭವಿ ಯುವ ಬ್ಯಾಟರ್ ಗಳು. ಹಿರಿಯ ಬ್ಯಾಟರ್ ಗಳು ಪೆವಿಲಿಯನ್ ಸೇರಿಕೊಂಡಾಗ ಜವಾಬ್ದಾರಿ ಅರಿತು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವಲ್ಲಿ ಯುವ ಬ್ಯಾಟರ್ ಗಳು ಪದೇ ಪದೇ ವಿಫಲರಾಗುತ್ತಿದ್ದಾರೆ.
ಹೀಗಾಗಿ ಇಂದಿನ ಪಂದ್ಯಕ್ಕೆ ಮಹಿಪಾಲ್ ಗೆ ಅವಕಾಶ ನೀಡಬಹುದು. ಯಾಕಂದರೇ ಮಹಿಪಾಲ್ ಐಪಿಎಲ್ ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
ಬೌಲಿಂಗ್ನಲ್ಲೂ ಹರ್ಷಲ್ ಪಟೇಲ್ ವಿಕೆಟ್ ಕಬಳಿಸುತ್ತಿಲ್ಲ. ಜೋಶ್ ಹ್ಯಾಜಲ್ ವುಡ್ ಒತ್ತಡ ಹಾಕುತ್ತಿದ್ದರೂ ಮೊಹಮ್ಮದ್ ಸಿರಾಜ್ ರನ್ ಲೀಕ್ ಮಾಡುತ್ತಿದ್ದಾರೆ.
ವನಿಂದು ಹಸರಂಗ ವಿಕೆಟ್ ಪಡೆದರೆ ಪಡೆದರು ಇಲ್ಲದಿದ್ದರೆ ದುಬಾರಿ ಅನ್ನುವ ಹಾಗಾಗಿದೆ.
ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಶಹಬಾಸ್ ಅಹ್ಮದ್ ಟೈಟ್ ಬೌಲಿಂಗ್ ಮಾಡಿದರೂ ವಿಕೆಟ್ ಸಿಗುತ್ತಿಲ್ಲ.
ಆರ್ಸಿಬಿಯ ಪ್ಲೇಯಿಂಗ್ 11 ಹೀಗಿದೆ :
ಫಾಫ್ ಡುಪ್ಲಸಿಸ್
ವಿರಾಟ್ ಕೊಹ್ಲಿ
ರಜತ್ ಪಟಿದಾರ್
ಮ್ಯಾಕ್ಸ್ ವೆಲ್
ಸುಯಾಶ್ ಪ್ರಭದೇಸಾಯಿ ಅಥವಾ ಮಹಿಪಾಲ್
ಶಹಬ್ಬಾಸ್ ಅಹ್ಮದ್
ದಿನೇಶ್ ಕಾರ್ತಿಕ್
ವನಿಂದು ಹಸರಂಗ
ಹರ್ಷಲ್ ಪಟೇಲ್
ಸಿರಾಜ್
ಜೋಶ್ ಹ್ಯಾಜಲ್ ವುಡ್
RCB vs GT Match RCB playing 11









