RCB vs GT Match : ಟಾಸ್ ಗೆದ್ದ ಬೆಂಗಳೂರು.. ಮಹಿಪಾಲ್ ಗೆ ಚಾನ್ಸ್
ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.
ಪ್ಲೇ ಆಫ್ಸ್ ದೃಷ್ಠಿಯಿಂದ ಬೆಂಗಳೂರು ತಂಡಕ್ಕೆ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಹೀಗಾಗಿ ಗುಜರಾತ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಆರ್ ಸಿ ಬಿ ತಂಡ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ಫಾಫ್ ಡುಪ್ಲಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಿರೀಕ್ಷೆ ಮಾಡಿದಂತೆ ಒಂದು ಬದಲಾವನೆ ಆಗಿದೆ.
ಸುಯಾಶ್ ಪ್ರಭುದೇಸಾಯಿ ಜಾಗದಲ್ಲಿ ಮಹಿಪಾಲ್ ಲೋಮ್ರಾರ್ ಅವಕಾಶ ಪಡೆದಿದ್ದಾರೆ.
ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದೆ. ಪ್ರದೀಪ್ ಸಂಗ್ವಾನ್, ಸಾಯಿ ಸುದರ್ಶನ್ ಪ್ಲೇಯಿಂಗ್ ಇಲೆವೆಲ್ ನಲ್ಲಿ ಚಾನ್ಸ್ ಪಡೆದಿದ್ದಾರೆ.
ಪ್ಲೇಯಿಂಗ್ 11
RCB | ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ಡಬ್ಲ್ಯು), ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೋರ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
GT | ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ಪ), ಹಾರ್ದಿಕ್ ಪಾಂಡ್ಯ (ಸಿ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ
rcb-vs-gt-match-Royal Challengers Bangalore opt to bat







