RCB | ರಜತ್ ಬಗ್ಗೆ ಮೈಕ್ ಹಸ್ಸನ್ ಹೇಳಿದ್ದೇನು..?
ಕೊಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ.
15 ನೇ ಆವೃತ್ತಿ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ 14 ರನ್ ಗಳಿಂದ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಆರ್ ಸಿಬಿ ತಂಡ ಕ್ವಾಲಿಫೇಯರ್ ಹಂತಕ್ಕೆ ತಲುಪಿದ್ದು, ಆರ್ ಸಿಬಿ ಡ್ರೆಸ್ಸಿಂಗ್ ರೂಮ್ ನಲ್ಲಿ ಸಂಭ್ರಮ ಮನೆ ಮಾಡಿದೆ.

ರೆಡ್ ಅಂಡ್ ಗೋಲ್ಡ್ ಕ್ಯಾಂಪ್ ನಲ್ಲಿ ಆರ್ ಬಿಸಿ ಆಟಗಾರರು ಮತ್ತು ಸಿಬ್ಬಂದಿ ವಿಕ್ಟರಿ ಸಾಂಗ್ ಹಾಡಿ ಸಂಭ್ರಮಿಸಿದ್ದಾರೆ.
ಇದೇ ವೇಳೆ ಆರ್ ಸಿಬಿಯ ಡೈರೆಕ್ಟರ್ ಮೈಕ್ ಹಸನ್ ಮಾತನಾಡಿ, ರಜತ್ ಪಟಿದಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಅಲ್ಲದೇ ಕೊನೆಯಲ್ಲಿ ಆರ್ ಸಿಬಿಗೆ ಗೆಲುವು ತಂದುಕೊಟ್ಟ ಹೆಜಲ್ ವುಡ್ ಮತ್ತು ಹರ್ಷಲ್ ಬೌಲಿಂಗ್ ಮೆಚ್ಚಿಕೊಂಡಿದ್ದಾರೆ. RCB What did Mike Hassan say about Rajat








