ಬೆಂಗಳೂರು: ಎರಡು ಬಾರಿ ಜಾಮೀನಿಗೆ ಅರ್ಜಿ ಹಾಕಿ ವಾಪಸ್ ಪಡೆದಿದ್ದ ನಟಿ ರಾಗಿಣಿ ಪರ ವಕೀಲರು 3ನೇ ಸಲ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್ನಲ್ಲಿ ಮುಂಬೈ ಮೂಲದ ವಕೀಲರು ರಾಗಿಣಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ರಾಗಿಣಿಯನ್ನು ಕಳೆದ ಶುಕ್ರವಾರ ಸಿಸಿಬಿ ಪೊಲೀಸರು ಬಂಧಿಸಿದ್ದರು. ಶನಿವಾರ ಜಾಮೀನಿಗೆ ಮೊದಲ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಸೋಮವಾರ ಜಾಮೀನು ಅರ್ಜಿ ವಾಪಸ್ ಪಡೆದು, ಎರಡು ದಿನಗಳ ಹಿಂದೆ ಮತ್ತೊಂದು ಅರ್ಜಿ ಹಾಕಿದ್ದರು. ಈ ಎರಡೂ ಅರ್ಜಿಗಳನ್ನು ವಾಪಸ್ ಪಡೆದ ರಾಗಿಣಿ ಪರ ವಕೀಲರು ಹೊಸದಾಗಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ನಾಳೆ ರಾಗಿಣಿ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಈ ನಡುವೆ, ಡ್ರಗ್ಸ್ ಪ್ರಕರಣದ 5ನೇ ಆರೋಪಿ ಡ್ರಗ್ ಪೆಡ್ಲರ್ ವೈಭವ್ ಜೈನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾನೆ. ಸಿಸಿಬಿ ಪೊಲೀಸರು ಕೇಸ್ನ ವಿಚಾರಣೆ ಆರಂಭಿಸುತ್ತಿದ್ದಂತೆ ನನಗೆ ಕೊರೊನಾ ಬಂದಿದೆ. ಟ್ರೀಟ್ಮೆಂಟ್ನಲ್ಲಿದ್ದೇನೆ ಎಂದು ಹೇಳಿದ್ದ ವೈಭವ್ ಜೈನ್ ಈಗ ನಾಪತ್ತೆಯಾಗಿದ್ದಾನೆ. ನಾಳೆ ವೈಭವ್ನ ಜಾಮೀನು ಅರ್ಜಿ ಕೂಡ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.
GOOD NEWS: ರಾಜ್ಯ ಸರ್ಕಾರದ ‘ಗುತ್ತಿಗೆ ಸಿಬ್ಬಂದಿ’ಗಳಿಗೆ ಸಿಹಿಸುದ್ದಿ: 7ನೇ ವೇತನ ಆಯೋಗದ ಶಿಫಾರಸು ‘ಸಂಚಿತ ವೇತನ ಪರಿಷ್ಕರಣೆ’ ಯಾರಿಗೆ ಪ್ರಯೋಜನ..?
ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ,ಈ ಸಂಬಂಧ ನಡವಳಿಯನ್ನು...