ಹಾಸನ:ಮಹಿಳೆಯೊಬ್ಬರು ಅಪರಿಚಿತರ ಕೈಗೆ ATM ಕಾರ್ಡ್ ಕೊಟ್ಟು ₹50 ಸಾವಿರ ಕಳೆದುಕೊಂಡ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಬೇಲೂರು ತಾಲೂಕಿನ ಅರೇಹಳ್ಳಿಯ ಮಹಿಳೆ ಪದ್ಮ ಹಣ ಕಳೆದುಕೊಂಡವರು ATM ನಿಂದ ಹಣ ಪಡೆಯಲು ಹೋಗಿದ್ದ ವೇಳೆ ಅಪರಿಚಿತ ಯುವಕನ ಸಹಾಯ ಕೇಳಿದ್ದಾರೆ. ಯುವಕ ₹10,000 ಡ್ರಾ ಮಾಡಿಕೊಟ್ಟಿದ್ದಾನೆ. ನಂತರ ಯಾಮಾರಿಸಿ ಹೆಚ್ಚಿನ ಹಣ ದೋಚಿದ್ದಾನೆ. ಮಹಿಳೆ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಮೆಸೇಜ್ ಬಂದಿದೆ. ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ:ಎರಡು ಸಾವು
ಶಿವಮೊಗ್ಗ: ಬಸ್ಸು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ...