ಶ್ರೀ ಗಜನಿ ಲಾಂಛನದಲ್ಲಿ ತಯಾರಾದ ವಾಸುದೇವ ಎಸ್. ಚಿತ್ರಾಪು ಮತ್ತು ದಿವಾಕರ ಶೆಟ್ಟಿ ನಿರ್ಮಾಣದ ತುಳು ಸಿನಿಮಾ ಇಲ್ಲ್ ಒಕ್ಕೆಲ್ ಶೀಘ್ರದಲ್ಲೇ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು ಅವರ ನಿರ್ದೇಶನವಿದ್ದು, ಸಿನಿಮಾದಲ್ಲಿ ಕಾಮಿಡಿಯ ಜೊತೆಗೆ ಒಂದಷ್ಟು ಭಯಾನಕತೆಯು ಇದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಅದ್ವಿತಿ ಶೆಟ್ಟಿ, ವಿಸ್ಮಯ ವಿನಾಯಕ್, ವಿ.ಜೆ. ವಿನೀತ್, ಚಂದ್ರಕಲಾ ಮೋಹನ್, ಸೀತಾರಾಮ್ ಕಟೀಲು, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.








