ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ರೀಲ್ ಲೈಫ್ ನ ಧೃತರಾಷ್ಟ್ರನ ರಿಯಲ್ ಲೈಫ್ ಜರ್ನಿಯೇ ರೋಚಕ..!

admin by admin
July 18, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ವಿಚಿತ್ರ ವೀರ್ಯನ ಮೊದಲ ಪತ್ನಿ ಅಂಬಿಕೆಯ ಪುತ್ರ, ಹಸ್ತಿನಾಪುರದ ಮಹಾರಾಜ, ಶತ ಕೌರವರ ಪಿತೃ, ಗಾಂಧಾರಿಯ ಪತಿ ಮಾಭಾರರತದ ಮಹಾಕಾವ್ಯದಲ್ಲಿ ಬರುವ ಬಹುಮುಖ್ಯಪಾತ್ರ ಧೃತರಾಷ್ಟ್ರ. ಅಂತಹ ಬಲಾಡ್ಯ ಧೃತರಾಷ್ಟ್ರನ ಪಾತ್ರವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿಯಲ್ಲಿ ನಿಭಾಯಿಸಿರುವ ಇವರ ನಿಜವಾದ ಹೆಸರು ಠಾಕುರ್ ಅನೂಪ್ ಸಿಂಗ್. ಅಂಧನಾದರು ತಾನೂ ಅಶಕ್ತನಲ್ಲ ಎಂಬ ಗಟ್ಟಿ ಮನೋಭಾವವಿದ್ದ ಧೃತರಾಷ್ಟ್ರನ ಪಾತ್ರಕ್ಕೆ ಜೀವ ತುಂಬಿ ಜನಮನ್ನಣೆ ಪಡೆದಿರುವ ಅನೂಪ್ ಅವರ ರಿಯಲ್ ಲೈಫ್ ಜರ್ನಿ ಸಹ ತುಂಬಾನೇ ರೋಚಕ…!

ಅನೂಪ್ ಸಿಂಗ್ ಅವರು ಮೂಲತಃ ಮಹಾರಾಷ್ಟ್ರದ ಮುಂಬೈನವರಾಗಿದ್ದು, ಮಾರ್ಚ್ 23 – 1989ರಲ್ಲಿ ಜನಿಸಿದ್ರು. ಇವರು ಪ್ರೊಫೆಷನಲ್ ಬಾಡಿಬಿಲ್ಡರ್ ಹಾಗೂ ನಟ ಕೂಡ ಹೌದು.! ಅನೂಪ್ ಅವರು ಕೇವಲ ನಟನೆಗಷ್ಟೇ ಅಲ್ಲ ತಮ್ಮ ಹ್ಯಾಂಡ್ಸಮ್‌ನೆಸ್ , ಲುಕ್ಸ್ ಅಂಡ್ ಬಾಡಿಬಿಲ್ಡಿಂಗ್ ಗೂ ಸಿಕ್ಕಾಪಟ್ಟೆ ಫೇಮಸ್. ತಾನೊಬ್ಬ ಪೈಲಟ್ ಆಗ್ಬೇಕು ಎಂದು ಬಾಲ್ಯದಿಂದಲೇ ಕನಸು ಕಂಡಿದ್ದ ಅನೂಪ್ ಅವರು ತಮ್ಮ ಪ್ಯಾಷನ್ ನಿಂದ ಕನಸನ್ನು ನನಸು ಮಾಡಿಕೊಂಡಿದ್ರು. ಅರ್ಥಾತ್ ಅನೂಪ್ ಅವರಿಗೆ 19 ವರ್ಷವಿರುವಾಗ ಅವರಿಗೆ ಪೈಲಟ್ ಲೈಸೆನ್ಸ್ ಸಿಕ್ಕಿತ್ತು. ಅಲ್ಲಿಂದ ಭಾರತದ ಪೈಲಟ್ ಆಗಿಯೂ ಕೆಲ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆದ್ರೆ 2008 ರಲ್ಲಿ ಕೆಲ ಏರ್ ಲೈನಲ್ಲಿನ ಸಮಸ್ಯೆಗಳಿಂದಾಗಿ ಅನೂಪ್ ಅವರು ಪೈಲಟ್ ಕೆರಿಯರ್ ಗೆ ವಿದಾಯ ಹೇಳಿದ್ರು. ಇದಾದ ಬಳಿಕ ಆಕ್ಟಿಂಗ್ ನಲ್ಲೂ ಇಂಟ್ರೆಸ್ಟ್ ಇದ್ದ ಅನೂಪ್ ಅನೇಕ ಆಡಿಷನ್ ಗಳಲ್ಲಿ ಭಾಗಿಯಾಗಿದ್ರೂ, ಸಾಕಷ್ಟು ಕಡೆಗಳಲ್ಲಿ ಸೋಲೇ ಕಾಣ್ತಾರೆ. ಆದ್ರೆ ಅನೂಪ್ ಅವರು ಇದಕ್ಕೆಲ್ಲ ಜಗ್ಗದೆ ತಮ್ಮ ಪ್ರಯತ್ನಗಳನ್ನ ಮುಂದುವರೆಸಿದರು. ಅದರ ಫಲವಾಗಿಯೇ 2013ರಲ್ಲಿ ಅನೂಪ್ ಅವರು ಮಹಾಭಾರತದ ಧೃತರಾಷ್ಟ್ರನಾಗಿ ಆಯ್ಕೆಯಾಗಿ ಸಕ್ಸಸ್ ಕಂಡರು. ಇದಾದ ಬಳಿಕ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ರು. ಅದ್ರಲ್ಲೂ ಅಕ್ಬರ್ ಬೀರ್ಬಲ್ , ಸಿಐಡಿ, ರಾಮಾಯಣ, ಚಂದ್ರಗುಪ್ತ ಮೌರ್ಯ, ದ್ವಾರಕಾದೀಶ್ ಭಗವಾನ್ ಶ್ರೀ ಕೃಷ್ಣ, ಕಹಾನಿ ಚಂದ್ರಕಾಂತಾ ಕಿ, ಜೈ ಭಜರಂಗಬಲಿ, ಹೀಗೆ ಹೆಚ್ಚಾಗಿ ಮೈಥಾಲಾಜಿಕ್ ಪಾತ್ರಗಳಲ್ಲೇ ಕಾಣಿಸಿಕೊಂಡ್ರು.

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 4, 2026
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

March 3, 2026

ಆದ್ರೆ ಮಹಾಭಾರತದ ಬಳಿಕ ಬಾಡಿ ಬಿಲ್ಡ್ ಮಾಡ್ಬೇಕು ಎಂಬ ಆಸಕ್ತಿ ಹೊಂದಿದ್ದ ಅನೂಪ್ ಅವರ ಫಿಟ್ ನೆಸ್ ಕೆರಿಯರ್ ನಲ್ಲೂ ಸಕ್ಸಸ್ ಕಂಡರು. ಅವರ ಶ್ರಮದ ಫಲವಾಗಿ 3 ಬಾರಿ ಇಂಟರ್ ನ್ಯಾಷನಲ್ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಕೇವಲ ಬಾಡಿ ಬಿಲ್ಡ್ ಮಾಡ್ಬೇಕು ಅನ್ಕೊಂಡಿದ್ದ ಅನೂಪ್ ಅವರು ಅದನ್ನ ತಮ್ಮ ಕೆರಿಯರ್ ಆಗಿಸಿಕೊಂಡಿದ್ದು ನಿಜಕ್ಕೂ ಇಂಟ್ರೆಸ್ಟಿಂಗ್.. ಕಿರುತೆರೆಯ ಹೊರತಾಗಿ ಕಮಾಂಡರ್ 2 ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿ ಮೂಡಿ ಬಂದ ರೋಗ್ ಚಿತ್ರದಲ್ಲಿ ವಿಭಿನ್ನವಾಗಿ ಸೈಕೋ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಅಮಿಗೋ ಅಮಿಗೋ ಅಂದ್ಕೊಂಡೇ ಜನರನ್ನ ತಮ್ಮ ನಟನೆಗೆ ಫಿದಾ ಆಗುವಂತೆ ಮಾಡಿದ್ರು. ಇದರ ಹೊರತಾಗಿ ತಮಿಳಿನ ಎಸ್ ಐ 3, ತೆಲುಗಿನ ವಿನ್ನರ್, ಆಚಾರಿ ಅಮೆರಿಕಾ ಯಾತ್ರಾ, ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ, , ಕನ್ನಡದ ಯಜಮಾನ, ಉದ್ಘರ್ಷ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಫಿಟ್ ನೆಸ್ ಇಂಡಸ್ಟ್ರಿಯಲ್ಲಿ ಇವರ ಹಾರ್ಡ್ ವರ್ಕ್ ಹಾಗೂ ಡೆಡಿಕೇಶನ್ ನಿಜಕ್ಕೂ ಸ್ಪೂರ್ತಿದಾಯಕ. 2015ರಲ್ಲಿ ವರ್ಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ಥೈಲ್ಯಾಂಡ್ ನಲ್ಲಿ ಗೋಲ್ಡ್ ಮೆಡಲ್, 49ನೇ ಸಾಲಿನ ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಕಂಚು, 2015ರ ಫಿಟ್ ಫ್ಯಾಕ್ಟರ್ ಮಿ.ಇಂಡಿಯಾದಲ್ಲಿ ಸಿಲ್ವರ್ ಮೆಡಲ್ ಗೆದ್ದಿದ್ದಾರೆ.

Tags: anoopdhrutarashtramahabharatha
ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 4, 2026
0

ದಿನ ಭವಿಷ್ಯ: 04-03-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಿತಾಂಶಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ....

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

by Shwetha
March 3, 2026
0

2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

by Shwetha
March 3, 2026
0

ರಾಜ್ಯ ರಾಜಕೀಯದಲ್ಲಿ ಬದಲಾದ ಸಮೀಕರಣಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಮ್ಮ ರಾಜಕೀಯ ಬಲವನ್ನು ಸಂಘಟಿಸಲು ಮುಂದಾಗಿರುವಂತೆ ಕಾಣುತ್ತಿದೆ. ತಮ್ಮ ತಂದೆ ಮತ್ತು ಹಿರಿಯ...

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

by Shwetha
March 3, 2026
0

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಭಾರೀ ತಲ್ಲಣಕ್ಕೊಳಗಾಗಿದೆ. ಯುದ್ಧ ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟದ...

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

by Shwetha
March 3, 2026
0

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram