
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಸ್ಮಾರ್ಟ್ಫೋನ್
ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಈ ಪ್ರಮುಖ ಸ್ಮಾರ್ಟ್ಫೋನ್ ಬೆಲೆ 499 ಯುರೋಗಳಿಂದ ಪ್ರಾರಂಭವಾಗುತ್ತದೆ.(ಭಾರತದಲ್ಲಿ ಸುಮಾರು 43,300 ರೂ). ರಿಯಲ್ಮೆ ಯುರೋಪ್ ಸೈಟ್ ಮೂಲಕ ಪೂರ್ವ ಬುಕಿಂಗ್ ಗೆ ಲಭ್ಯವಿದೆ.
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಸ್ಮಾರ್ಟ್ಫೋನ್ 6.6 ಇಂಚಿನ FHD+ ಜೊತೆ LCD ಡಿಸ್ಪ್ಲೇ ಹೊಂದಿದ್ದು,
1,080 × 2,400 ಪಿಕ್ಸೆಲ್ ರೆಸಲ್ಯೂಶನ್ 120Hz ರಿಫ್ರೆಶ್ ರೇಟ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಫಿಂಗರ್ ಪ್ರಿಂಟ್ ಸಂವೇದಕವನ್ನು ಪವರ್ ಬಟನ್ ನಲ್ಲಿ ಹೊಂದಿದೆ.
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳು ಮತ್ತು ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಫೋನ್ ಎಫ್ / 1.8 ಅಪರ್ಚರ್ ಹೊಂದಿರುವ 64MP ಪ್ರೈಮರಿ ಸೆನ್ಸಾರ್ 8MP ಪೆರಿಸ್ಕೋಪ್ ಲೆನ್ಸ್ f/ 2.3 ಅಪರ್ಚರ್ ಹೊಂದಿರುವ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಕೊನೆಯದಾಗಿ f/ 2.4 ಅಪರ್ಚರ್ ಹೊಂದಿರುವ 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ.
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಪ್ರೈಮರಿ ಸೆಲ್ಫಿ ಕ್ಯಾಮೆರಾ f/ 2.5 ಅಪರ್ಚರ್ ಹೊಂದಿರುವ 32MP ಲೆನ್ಸ್ ಆಗಿದ್ದರೆ ಸೆಕೆಂಡರಿ f/ 2.2 ಅಪರ್ಚರ್ ಹೊಂದಿರುವ 8MP ಅಲ್ಟ್ರಾ-ವೈಡ್ ಲೆನ್ಸ್ ಆಗಿದೆ.
ಆಂಡ್ರಾಯ್ಡ್ 10 ಆಧಾರಿತ ರಿಯಲ್ಮೆ UI ಸಾಫ್ಟ್ ವೇರ್ ನೊಂದಿಗೆ ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಬರುತ್ತದೆ.
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855+ ಪ್ರೊಸೆಸರ್ ಮತ್ತು ಅಡ್ರಿನೊ 640 ಜಿಪಿಯು ಜೋಡಿಯಾಗಿ 12GB ವರೆಗೆ LPDDR4x RAM ಮತ್ತು 256GB UFS 3.1 ಸ್ಟೋರೇಜ್ ಅನ್ನು ಹೊಂದಿದೆ.
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.
8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಬೇಸ್ ಮಾಡೆಲ್
12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್
ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ ಸ್ಟೋರೇಜ್ ಅನ್ನು ಸ್ಮಾರ್ಟ್ಫೋನ್ ಬೆಂಬಲಿಸುವುದಿಲ್ಲ.
ರಿಯಲ್ಮೆ ಎಕ್ಸ್ 3 ಸೂಪರ್ ಜೂಮ್ ಸ್ಮಾರ್ಟ್ಫೋನ್ 4200mAh ಬ್ಯಾಟರಿಯೊಂದಿಗೆ ಬರುತ್ತಿದ್ದು, 30W ಡಾರ್ಟ್ ಚಾರ್ಜ್ ಅನ್ನು ಬೆಂಬಲಿಸುತ್ತದೆ.
ರಿಯಲ್ಮೆ ಸ್ಮಾರ್ಟ್ಫೋನ್ ಹಲವಾರು ಕನೆಕ್ಟಿವಿಟಿ ವೈಶಿಷ್ಟ್ಯ ಗಳನ್ನು ಒಳಗೊಂಡಿದೆ – ಬ್ಲೂಟೂತ್ ವಿ 5.0, ಡ್ಯುಯಲ್-ಬ್ಯಾಂಡ್ ವೈ-ಫೈ, ಮತ್ತು ಚಾರ್ಜಿಂಗ್ಗಾಗಿ ಯುಎಸ್ಬಿ ಟೈಪ್-ಸಿ. ಇದು ಜಿಪಿಎಸ್, ಗ್ಲಾನ್ಸ್, ಬೀಡೌ, ಮ್ಯಾಗ್ನೆಟಿಕ್ ಇಂಡಕ್ಷನ್ ಸೆನ್ಸಾರ್, ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಗೈರೊ-ಮೀಟರ್ ಮತ್ತು ಆಕ್ಸಿಲರೇಶನ್ ಸೆನ್ಸಾರ್ನೊಂದಿಗೆ ಬರುತ್ತದೆ.








