Realme 9 Pro, 9 Pro Plus ಭಾರತದಲ್ಲಿ ಬಿಡುಗಡೆ – ಬೆಲೆ, ವಿವರಗಳು ತಿಳಿಯಲು ಕ್ಲಿಕ್ ಮಾಡಿ..
Realme 9 Pro ಸರಣಿಯ ಸ್ಮಾರ್ಟ್ ಪೋನ್ ಗಳನ್ನ ಭಾರತದಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಈ ಸರಣಿಯಲ್ಲಿ 9 ಪ್ರೊ ಮತ್ತು 9 ಪ್ರೊ ಪ್ಲಸ್ ಎಂಬ ಎರಡು ಫೋನ್‌ಗಳು ಬಿಡುಗಡೆಯಾಗಲಿವೆ. 9 ಪ್ರೊ ಪ್ಲಸ್ ಈ ರೀತಿಯ ಸರಣಿಯಲ್ಲಿ ಮೊದಲನೆ ಮೊಬೈಲ್. ರಿಯಲ್ ಮಿ ಈಗಾಗಲೇ ಕೆಲವು ಉನ್ನತ-ಮಟ್ಟದ ಫೀಚರ್ಸ ಮತ್ತು ವಿಶೇಷಣಗಳಿರುವ ಮೊಬೈಲ್ ಗಳನ್ನ ಬಿಡುಗಡೆ ಮಾಡಿದೆ.
ಹೊಸ Realme 9 Pro Plus ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ Sony IMX766 ಫ್ಲ್ಯಾಗ್‌ಶಿಪ್ ಕ್ಯಾಮೆರಾವನ್ನು ಹೊಂದಿದೆ. – ಇದು ಭಾರತದಲ್ಲಿನ Realme ಫೋನ್‌ಗಳಲ್ಲಿ ಮೊದಲ ಭಾರಿಗೆ ಬಿಡುಗಡೆಯಾಗುತ್ತಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ನೊಂದಿಗೆ ಬರುತ್ತದೆ.
ಇಂದು ಮೊದಲ ಬಾರಿಗೆ Realme 9 Pro ಮತ್ತು Realme 9 Pro Plus ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಭಾರತಕ್ಕೂ ಮೊದಲು ಈ ಪೋನ್ ಗಳು ಎಲ್ಲಿಯೂ ಬಿಡುಗಡಯಾಗಿಲ್ಲ ಎನ್ನುವುದು ವಿಶೇಷ. Realme 9 Pro ಸರಣಿಯು Realme 9i ಸರಣಿಯ ಭಾಗವಾಗಿದೆ. Realme 9i ಸರಣಿಯಲ್ಲಿ ಕನಿಷ್ಠ ನಾಲ್ಕು ಫೋನ್‌ಗಳಿವೆ ಎಂದು ಕಂಪನಿ ಹೇಳಿದೆ.
Realme 9 Pro ಸರಣಿಯ ಬಿಡುಗಡೆ ಕಾರ್ಯಕ್ರಮವು ಇಂದು ಮಧ್ಯಾಹ್ನ 1.30 ಕ್ಕೆ ಜರುಗಿತು. ಮತ್ತು ಕಂಪನಿಯ YouTube ಚಾನಲ್, Twitter ಹ್ಯಾಂಡಲ್ ಮತ್ತು ಫೇಸ್‌ಬುಕ್ ಖಾತೆಯಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿತ್ತು.
ಭಾರತದಲ್ಲಿ Realme 9 Pro, 9 Pro Plus ಬೆಲೆ
Realme 9 Pro Plus ಬೆಲೆ 24,999 (6/128GB), 26,999 (8/128GB), 28,999 (8/256GB)
Realme 9 Pro ಬೆಲೆ ರೂ 17,999 (6/128GB) ಮತ್ತು ರೂ 20,999 (8/128GB).
Realme 9 Pro Plus ಮೊಬೈಲ್ ಫೆಬ್ರವರಿ 21 ರಂದು ಮತ್ತು Realme 9 Pro ಫೆಬ್ರವರಿ 23 ರಿಂದ ಮೊದಲ ಮಾರಾಟ ಪ್ರಾರಂಭವಾಗಲಿದೆ.
Realme 9 Pro, 9 Pro ಪ್ಲಸ್ ವಿಶೇಷಣಗಳು
Realme 9 Pro ಸರಣಿಯು 5G ಸಪೋರ್ಟ್ ತಂತ್ರಜ್ಞಾನ ಹೊಂದಿದೆ ಎಂದು ಕಂಪನಿಯು ಮೊದಲೇ ತಿಳಿಸಿದೆ. 9 ಪ್ರೊ ಪ್ಲಸ್ ಡೈಮೆನ್ಸಿಟಿ 920 ಪ್ರೊಸೆಸರ್ ಮತ್ತು ಮುಖ್ಯ ಕ್ಯಾಮೆರಾದಲ್ಲಿ ಸೋನಿ IMX766 ಸೆನ್ಸಾರ್ ಹೊಂದಿದೆ. 9 ಪ್ರೊ ಪ್ಲಸ್ ಮೊಬೈಲ ಹಿಂಭಾಗದಲ್ಲಿ ಬಣ್ಣ ಬದಲಾಯಿಸುವ ಮಾಡೆಲ್ ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.
Realme 9 Pro Plus, 8GB RAM ಮತ್ತು 256GB ಯಷ್ಟು ಮೆಮೋರಿಯನ್ನ ಹೊಂದಿರುತ್ತದೆ. 60W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4500mAh ಬ್ಯಾಟರಿಯಿದೆ.








