ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸದಿರಲು ಕಾರಣವೇನು ಗೊತ್ತಾ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸದಿರಲು ಕಾರಣವೇನು ಎಂದು ತಿಳಿಸಿದ್ದಾರೆ. ಗಗನಕ್ಕೇರಿರುವ ಇಂಧನ ಬೆಲೆಗಳಿಗೆ ಹಿಂದಿನ ಯುಪಿಎ ಸರ್ಕಾರ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಯುಪಿಎ ಸರ್ಕಾರವು ತೈಲ ಬಾಂಡ್ಗಳನ್ನು ನೀಡಿತ್ತು ಎಂದು ಹಣಕಾಸು ಸಚಿವರು ಹೇಳಿದ್ದು, ಇದರಿಂದಾಗಿ ತೈಲ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಹಣಕಾಸು ಸಚಿವೆಯ ಹೇಳಿಕೆ ಪ್ರಕಾರ, ಸರ್ಕಾರವು ಈ ಬಾಂಡ್ಗಳಿಗೆ ಪಾವತಿಸಬೇಕಾಗುತ್ತದೆ. 2005 ಮತ್ತು 2010 ರ ನಡುವೆ, ಅಂದಿನ ಕೇಂದ್ರದ ಯುಪಿಎ ಸರ್ಕಾರವು ತೈಲ ಕಂಪನಿಗಳಿಗೆ ತೈಲ ಬಾಂಡ್ಗಳನ್ನು ನೀಡಿತು. ಇದರ ಅನುಕೂಲವೆಂದರೆ ಅಂದಿನ ಸರ್ಕಾರವು ಕಂಪನಿಗಳಿಗೆ ನಗದು ಸಬ್ಸಿಡಿಗಳನ್ನು ನೀಡಬೇಕಾಗಿರಲಿಲ್ಲ ಮತ್ತು ಅದನ್ನು ಮುಂದಿನ ಹಲವು ವರ್ಷಗಳಲ್ಲಿ ಕಂತುಗಳಲ್ಲಿ ಪಾವತಿಸಬೇಕಾಗಿತ್ತು.
ತೈಲ ಬಾಂಡ್ಗಳ ಪ್ರಯೋಜನವೇನು?
ತೈಲ ಬಾಂಡ್ಗಳು ಒಂದು ರೀತಿಯ ವಿಶೇಷ ಸೆಕ್ಯೂರಿಟಿಗಳಾಗಿವೆ. ಇವುಗಳನ್ನು ಸರ್ಕಾರವು ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂನಂತಹ ತೈಲ ಮಾರುಕಟ್ಟೆ ಕಂಪನಿಗಳಿಗೆ ನಗದು ಸಬ್ಸಿಡಿಗಳ ಬದಲಿಗೆ ದುಬಾರಿ ತೈಲದ ಹೊರೆ ಸಾರ್ವಜನಿಕರ ಮೇಲೆ ಬೀಳದಂತೆ ನೀಡುತ್ತದೆ. ತೈಲ ಬಾಂಡ್ಗಳು 15 ರಿಂದ 20 ವರ್ಷಗಳಷ್ಟು ದೀರ್ಘಾವಧಿ ಅವಧಿ ಹೊಂದಿರುತ್ತವೆ. ಈ ಬಾಂಡ್ಗಳ ಮೇಲೆ ತೈಲ ಕಂಪನಿಗಳಿಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಯುಪಿಎ ಸರ್ಕಾರ 1.44 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್ಗಳನ್ನು ನೀಡಿದೆ ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. 2014-15ರಲ್ಲಿ ತೈಲ ಬಾಂಡ್ಗಳ ಬಾಕಿ 1.34 ಲಕ್ಷ ಕೋಟಿ ರೂ, 2014-15ರಲ್ಲಿ ಬಡ್ಡಿ ಪಾವತಿಯ ಬಾಕಿ 10255 ಕೋಟಿ ರೂ ಆಗಿದ್ದು ಮೋದಿ ಸರ್ಕಾರ 70,195 ಕೋಟಿ ಬಡ್ಡಿಯನ್ನು ಪಾವತಿಸಿದೆ. ಇದರೊಂದಿಗೆ ಮೋದಿ ಸರ್ಕಾರವು 3500 ಕೋಟಿಗಳಷ್ಟು ಮೂಲ ಮೊತ್ತವನ್ನು ಪಾವತಿಸಿದೆ. 2026 ರ ವೇಳೆಗೆ ಸರ್ಕಾರವು 37000 ಕೋಟಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 2026 ರ ವೇಳೆಗೆ ಸರ್ಕಾರವು ಮೂಲ ಮೊತ್ತದ ರೂ 1.30 ಲಕ್ಷ ಕೋಟಿಗಳನ್ನು ನೀಡಬೇಕಿದೆ ಎಂದು ಸಚಿವೆ ತಿಳಿಸಿದರು.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಮಾತನಾಡಿ 1.3 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್ಗಳು ಇಷ್ಟು ದಿನ ಪಾವತಿಗೆ ಬಾಕಿ ಇರುವುದಿಲ್ಲ. ಕಳೆದ ಏಳು ವರ್ಷಗಳಲ್ಲಿ ಇದಕ್ಕೆ ಸರ್ಕಾರ ಹಲವು ಬಾರಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ವೆಜ್ ಪನೀರ್ ಫ್ರೈಡ್ ರೈಸ್ https://t.co/bpvIFfVtRu
— Saaksha TV (@SaakshaTv) August 16, 2021
ಬೇಸಿಗೆಯಲ್ಲಿ ಈರುಳ್ಳಿಯನ್ನು ಏಕೆ ಹೆಚ್ಚು ಬಳಸಬೇಕು?#Saakshatv #healthtips #summer #onion https://t.co/lB7oABRZJx
— Saaksha TV (@SaakshaTv) August 16, 2021
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ – ಎಸ್ಬಿಐನಿಂದ ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ#StateBank #Homeloans https://t.co/W0TBsvT9cV
— Saaksha TV (@SaakshaTv) August 15, 2021
ನಿಂಬೆಯ ಅತಿಯಾದ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು#Saakshatv #healthtips #lemon https://t.co/5YGdDNcKq3
— Saaksha TV (@SaakshaTv) August 15, 2021
#skyrocketing #prices #petrol #diesel








