ಮುಂಬೈ ಇಂಡಿಯನ್ಸ್ ಗೆ ನಡೆಗೆ ಫ್ಯಾನ್ಸ್ ಕಿಡಿ… ಸೂರ್ಯಗೆ ಚಾನ್ಸ್ ಕೊಡಲಿಲ್ಲ ಯಾಕೆ..?
ಐಪಿಎಲ್ 2022 ರ ಭಾಗವಾಗಿ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಸ್ಟಾರ್ ಸೂರ್ಯಕುಮಾರ್ ಯಾದವ್ ಲಭ್ಯವಿರಲಿಲ್ಲ.
ಯಾದವ್ ಗಾಯದಿಂದಾಗಿ ಬೆಂಗಳೂರಿನ ಎನ್ ಸಿಎ ಅಕಾಡೆಮಿಯಲ್ಲಿ ಪುನರ್ವಸತಿಯಲ್ಲಿದ್ದರು.
ಆದ್ರೆ ಇತ್ತೀಚೆಗೆ ಯಾದವ್ ತಂಡ ಸೇರಿಕೊಂಡಿದ್ದಾರೆ. ಜೊತೆಗೆ ಬಯೋಬಬಲ್ ಅನ್ನು ಕೂಡ ಪೂರ್ತಿ ಮಾಡಿದ್ದರು.
ಹೀಗಾಗಿ ಅವರು ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ಅಂದಾಜಿಸಲಾಗಿತ್ತು.
ಆದ್ರೆ ಅವರು ಮುಂಬೈನ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.
ಇನ್ನು ಪಂದ್ಯದಲ್ಲಿ ರಾಜಸ್ಥಾನ ವಿರುದ್ಧದ ಮುಂಬೈ ಇಂಡಿಯನ್ಸ್ ಸೋತಿತ್ತು. 193 ರನ್ಗಳ ಗುರಿಯನ್ನು ತಲುಪಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 170 ರನ್ ಗಳಿಸಿ 23 ರನ್ ಗಳೊಂದಿಗೆ ಸೋಲುಂಡಿದೆ.

ಆದರೆ, ಸೂರ್ಯಕುಮಾರ್ ಅವರನ್ನು ಈ ಪಂದ್ಯದಲ್ಲಿ ಆಡಿಸದೇ ಇರುವುದಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಅಭಿಮಾನಿಗಳು ಟೀಕಿಸಿದ್ದಾರೆ.
ಸೂರ್ಯ ಆಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು. ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಖಂಡಿತ ಇರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು ಆದರೆ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್, ”ವಾಸ್ತವವಾಗಿ, ಸೂರ್ಯಕುಮಾರ್ ರಾಜಸ್ಥಾನ ವಿರುದ್ಧ ಪಂದ್ಯ ಆಡಬೇಕಿತ್ತು. ಆದರೆ ಅವರು ಫಿಟ್ ಆಗಿಲ್ಲ. ಹೀಗಾಗಿ ಅವರನ್ನ ಪಂದ್ಯದಿಂದ ಕೈ ಬಿಡಲಾಯಿತು ಎಂದಿದೆ. reason-why-surya-kumar-yadav-not-played-vs-rr








