ರಾಜ್ಯ BJPಯಲ್ಲಿ ಉದ್ವಿಗ್ನತೆಯು ತೀವ್ರವಾಗುತ್ತಿರುವ ನಡುವೆ ರೆಬೆಲ್ ನಾಯಕರ ಗುಂಪು ದೆಹಲಿಯಲ್ಲಿ ಆಕ್ಟಿವ್ ಆಗಿದೆ. ರಾಜ್ಯ BJP ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ದೀರ್ಘಕಾಲದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಈ ರೆಬೆಲ್ ತಂಡ ಇದೀಗ ನೇರವಾಗಿ ದೆಹಲಿ ಹೈಕಮಾಂಡ್ ಬಾಗಿಲು ತಟ್ಟಿದೆ.
ಬಂಡಾಯ ರೂಪುಗೊಂಡಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಕುಮಟಳ್ಳಿ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ವಿಶೇಷ ಸಭೆ ನಡೆಸಿ ಮುಂದಿನ ರಣತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಇದೀಗ ಈ ತಂಡಕ್ಕೆ ಮತ್ತಷ್ಟು ಬಲ ಸೇರುವಂತೆ ಸಿದ್ದೇಶ್ವರ್ ಮತ್ತು ಬಿ.ಪಿ. ಹರೀಶ್ ಕೂಡ ದೆಹಲಿಗೆ ಹಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೆಬೆಲ್ ನಾಯಕರು ವಿಜಯೇಂದ್ರ ಮುಂದುವರಿಕೆ ಬೇಡ ಎಂದು ಹೈಕಮಾಂಡ್ ಮೇಲೆ ಭಾರೀ ಒತ್ತಡ ಹೇರುತ್ತಿದ್ದಾರೆ. ಸಂಘಟನೆಯನ್ನು ಪುನರ್ ರಚನೆ ಮಾಡಬೇಕೆಂಬ ಬೇಡಿಕೆ ಜೋರಾಗಿದ್ದು, ರಾಜ್ಯದ ರಾಜಕೀಯದಲ್ಲಿ ಹೊಸ ತಿರುವು ತರುವ ಸಾಧ್ಯತೆಗಳಿವೆ.
ದೆಹಲಿಯಲ್ಲಿ ತಂಡದ ಬಲ ಹೆಚ್ಚುತ್ತಿರುವಂತೆಯೇ, BJP ಹೈಕಮಾಂಡ್ ಯಾವ ರೀತಿಯ ತೀರ್ಮಾನಕ್ಕೆ ಬರುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.








