ನೀವು ಫೋನ್ ಪೇನಲ್ಲಿ ರೀಚಾರ್ಜ್ ಮಾಡ್ತೀರಾ.. ಹಾಗಾದ್ರೆ ಈ ಸ್ಟೋರಿ ಓದಿ
ಫೋನ್ ಪೇ ಭಾರತದಲ್ಲಿ ಅತ್ಯಂತ ಜನಪ್ರಿಯ, ವ್ಯಾಪಕವಾಗಿ ಬಳಸಲಾಗುವ ಪಾವತಿ ಅಪ್ಲಿಕೇಶನ್‍ಗಳಲ್ಲಿ ಒಂದು. ದೇಶದಲ್ಲಿ ಆನ್ ಲೈನ್ ವಹಿವಾಟು ಆರಂಭವಾದ ನಂತರ ಜನರು ಹೆಚ್ಚಾಗಿ ಫೋನ್ ಪೇ ಆಪ್ ಅನ್ನು ನೆಚ್ಚಿಕೊಂಡಿದ್ದಾರೆ. ಹಣ ವರ್ಗಾವಣೆ, ಮೊಬೈಲ್ ರಿಜಾರ್ಜ್ ಮಾಡೋದಕ್ಕೆ ಹೆಚ್ಚಿನ ಜನರು ಫೋನ್ ಪೇ ಬಳಸುತ್ತಾರೆ. ಅದರಲ್ಲೂ ಯುವ ಜನತೆಗೆ ಫೋನ್ ಪೇಯೊಂದು ಚಟದಂತಾಗಿದ್ದು, ಅಂಗಡಿಯಲ್ಲಿ ಏನೇ ಖರೀದಿಸಿದ್ರೂ ಅದು ಎಷ್ಟೇ ಕಡಿಮೆ ಮೊತ್ತವಾಗಿದ್ದರೂ ಫೋನ್ ಪೇ ಅಲ್ಲಿ ವ್ಯವಹಾರ ಮಾಡುತ್ತಾರೆ.
ಇದಲ್ಲದೇ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು ಫೋನ್ ಪೇ ಬೇಕೇ ಬೇಕು ಎನ್ನುವಂತಾಗಿದೆ. ಕುಟುಂಬದಲ್ಲಿ ಯಾರದ್ದೇ ಮೊಬೈಲ್ ನಲ್ಲಿ ರಿಚಾರ್ಜ್ ಖಾಲಿಯಾದ್ರೂ, ಕೂತಲ್ಲಿಯೇ ಫೋನ್ ಪೇ ಮೂಲಕ ರಿಚಾರ್ಜ್ ಮಾಡಲಾಗುತ್ತಿದೆ.
ಆದ್ರೆ ಇದೀಗ ಹೀಗೆ ಫೋನ್ ಪೇನಲ್ಲಿ ರೀಚಾರ್ಜ್ ಮಾಡೋವರಿಗೆ ಕಂಪನಿ ಶಾಕ್ ನೀಡಿದೆ. ಇನ್ನು ಮುಂದೆ ಪ್ರತಿ ವಹಿವಾಟಿಗೆ ಸ್ವಲ್ಪ ಹೆಚ್ಚುವರಿ ಹಣವನ್ನು ನೀಡಬೇಕು. ಹೆಚ್ಚುವರಿ ಹಣವನ್ನು ವರ್ಗಾಯಿಸಲು ಅಥವಾ ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. 50 ರೂ.ಗಿಂತ ಹೆಚ್ಚಿನ ಮೌಲ್ಯದ ಮೊಬೈಲ್ ರೀಚಾರ್ಜ್‍ಗಳಿಗೆ ಪ್ರತಿ ವಹಿವಾಟಿಗೆ 1 ರಿಂದ 2 ರೂ.ಗಳವರೆಗೆ ಶುಲ್ಕವನ್ನು ವಿಧಿಸಲಾಗುವುದು ಎಂದು ಕಂಪನಿ ಹೇಳಿದೆ.
ರೂ .50 ಕ್ಕಿಂತ ಕಡಿಮೆ ಇರುವ ರೀಚಾರ್ಜ್‍ಗಳಿಗೆ ಯಾವುದೇ ಶುಲ್ಕವಿಲ್ಲ ಎಂದು ಕಂಪನಿ ತಿಳಿಸಿದೆ. ಆದ್ರೆ ರೂಪಾಯಿ 50ಕ್ಕಿಂತ ಹೆಚ್ಚು ರೀಚಾರ್ಜ್ ಮಾಡಿದ್ದಲ್ಲಿ ಹೆಚ್ಚುವರಿ ಶುಲ್ಕ ಕಟ್ಟಬೇಕಾಗುತ್ತದೆ.









