ಮಹಾ ವಿಪತ್ತಿನ ಎಚ್ಚರಿಕೆ.. ತಡೆಯದಿದ್ದರೇ ವಿನಾಶವೇ
ವಾತಾರವಣದಲ್ಲಾಗುತ್ತಿರುವ ಬದಲಾವಣೆಗಳು ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಿವೆ. ಹಿಮಾಲಯದಲ್ಲಿ ಮಂಜು ಶರವೇಗದಲ್ಲಿ ಕರಗುತ್ತಿದೆ.
ಪಾಕಿಸ್ತಾನ್ ನಲ್ಲಿ ಪ್ರವಾಹ, ಚೈನಾದಲ್ಲಿ ಅನಾವೃಷ್ಠಿ, ಭಾರತದಲ್ಲಿ ಕಂಡು ಕೇಳದ ವಾತಾವರಣ ಬದಲಾವಣೆ..
ಈ ಎಲ್ಲದಕ್ಕೂ ಅದೇ ಕಾರಣ ಎಂದು ಭಾರತೀಯ ಶಾಸ್ತ್ರಜ್ಞರ ಅಧ್ಯಾಯನದಲ್ಲಿ ತಿಳಿದುಬಂದಿದೆ.
ಹಿಮಾಚಲ ಪ್ರದೇಶದ ಚೋಟಾ ಶಿಗ್ರಿ ಹಿಮಾನಿ ನದಿಯಲ್ಲಿ ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಂಜು ಕರಗಿದೆ.
ಐಐಟಿ ಇಂಡೋ ಗ್ಲೇಶಿಯಾಲಜಿಸ್ಟ್ ಮೊಹಮ್ಮದ್ ಫಾರೂಕ್ ಅಜಮ್ ಮಾತನಾಡಿ, ಕಳೆದ ಜೂನ್ನಲ್ಲಿ ಅಳವಡಿಸಲಾದ ಡಿಸ್ಚಾರ್ಜ್ ಮಾಪನ ವ್ಯವಸ್ಥೆಯು ಆಗಸ್ಟ್ ವೇಳೆಗೆ ಸಂಪೂರ್ಣವಾಗಿ ನಾಶವಾಗಿದೆ.
ಕಳೆದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಮ್ಮ ದೇಶದಲ್ಲಿ ತಾಪಮಾನವು 100 ವರ್ಷಗಳ ದಾಖಲೆಗಳನ್ನು ಮುರಿದಿದೆ.
ಅದಕ್ಕೆ ಕಾರಣ ಹಿಮನದಿಗಳ ಕರಗುವಿಕೆ. ಕಳೆದ ವಾರ ನಮ್ಮ ಇಡೀ ತಂಡ ಶಿಗ್ರಿ ಬಳಿ ಇದ್ದು ಪರೀಕ್ಷೆ ನಡೆಸಿದೆ. ಅಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಕರಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘‘ಅರೇಬಿಯನ್ ಸಮುದ್ರದಲ್ಲಿನ ವಿಪರೀತ ಶಾಖದಿಂದಾಗಿ ನೀರೆಲ್ಲ ಹಬೆಯ ಮೋಡಗಳಾಗಿ ಮಾರ್ಪಟ್ಟು ಎಡೆಬಿಡದೆ ಮಳೆ ಸುರಿಯುತ್ತಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಹಿಮಾಲಯ ಕರಗಿದರೇ ?
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದಲ್ಲಿನ ಹಿಮವು 2000-2016ರ ನಡುವೆ ಹಿಂದಿನ ನಾಲ್ಕು ದಶಕಗಳಲ್ಲಿ ಕರಗಿದ್ದಕ್ಕಿಂತ 10 ಪಟ್ಟು ಹೆಚ್ಚು ಕರಗಿದೆ! ಇದು ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ದೊಡ್ಡ ಅಪಾಯದ ಎಚ್ಚರಿಕೆಯಾಗಿದೆ.
ಕಾರಕೋರಂ ಮತ್ತು ಹಿಂದೂ ಕುಶ್ ಪರ್ವತ ಶ್ರೇಣಿಗಳಲ್ಲಿ 55 ಸಾವಿರ ಹಿಮನದಿಗಳಿವೆ. ಹಿಮಾಲಯದ ಗಂಗಾ, ಯಮುನಾ, ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳು 8 ದೇಶಗಳ 130 ಕೋಟಿ ಜನರ ಶುದ್ಧ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.
5,77,000 ಚದರ ಕಿಲೋಮೀಟರ್ ಕೃಷಿ ಭೂಮಿಗೆ ನೀರಾವರಿಯಾಗಿದೆ. 26,432 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಕೇಂದ್ರಗಳಿವೆ.
ಹಿಮಾಲಯದಲ್ಲಿ ಹಿಮ ಕರಗಿದರೆ ಎಲ್ಲರ ಮೇಲೂ ಪರಿಣಾಮ ಬೀರಲಿದೆ, 2050ರ ವೇಳೆಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ 170 ಕೋಟಿ ಜನರಿಗೆ ನೀರು ಸಿಗುವುದಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.
ನೀರಿಗಾಗಿ ದೇಶಗಳ ನಡುವೆ ಯುದ್ಧಗಳು ನಡೆಯಬಹುದು ಎನ್ನುತ್ತಾರೆ ತಜ್ಞರು. ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಪಾಕಿಸ್ತಾನವು ಕೇವಲ 1 ಪ್ರತಿಶತವನ್ನು ಹೊಂದಿದೆ. ಆದರೂ ಹವಾಮಾನ ಬದಲಾವಣೆಯು ಆ ದೇಶವನ್ನು ಬಲಿ ಪಡೆಯುತ್ತಿದೆ.








