ಉರಗ ತಜ್ಞ ವಾವಾ ಸುರೇಶ್ ಆರೋಗ್ಯದಲ್ಲಿ ಚೇತರಿಕೆ Saaksha Tv
ಕೇರಳ: ಕೇರಳದ ಖ್ಯಾತ ಉರಗ ತಜ್ಞ ವಾವಾ ಸುರೇಶ್ ಅವರಿಗೆ ಹಾವು ಕಡಿದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜನವರಿ 31 ಸೋಮವಾದಂದು ವಾವಾ ಸುರೇಶ್ ಕೊಟ್ಟಾಯಂನ ಕುರಿಚಿಯಲ್ಲಿ ಕಂಡು ಬಂದಿದ್ದ ನಾಗರ ಹಾವನ್ನು ಹಿಡಿಯುವ ವೇಳೆ ಹಾವು ಸುರೇಶ್‌ಗೆ ಕಚ್ಚಿತ್ತು. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಮುಂದುವರಿಸಲಾಯಿತು.
ಈಗ ಅವರ ದೇಹ ಹಾವಿನ ವಿಷದಿಂದ ಮುಕ್ತವಾಗಿದೆ. ಹಾವು ಕಚ್ಚಿದ ಗಾಯವನ್ನು ಒಣಗಿಸಲು ಮಾತ್ರ ಈಗ ಔಷಧ ನೀಡಲಾಗುತ್ತಿದೆ. ಅವರ ಜ್ಞಾಪಕ ಶಕ್ತಿ ಮತ್ತು ಮಾತನಾಡುವ ಸಾಮರ್ಥ್ಯ ಚೆನ್ನಾಗಿದೆ. ಅವರು ಈಗ ನಡೆಯಬಹುದು. ಎರಡು ದಿನಗಳ ವೀಕ್ಷಣೆಯ ನಂತರ ಅವರನ್ನು ಬಹುಶಃ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವಾವಾ ಸುರೇಶ್ ಅವರು ಹಾವುಗಳನ್ನು ಹಿಡಿಯುವುದರಲ್ಲಿ ಎಕ್ಸ್ಪರ್ಟ. ಇವರು ಕೇರಳ ರಾಜದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಸುಮಾರು 40 ವರ್ಷಗಳಿಂದ ಹಾವುಗಳನ್ನು ಹಿಡದಿದ್ದಾರೆ. ಇವರು ನಾಗರ ಹಾವು, ಕಾಳಿಂಗ ಸರ್ಪ ಹೀಗೆ ಸುಮಾರು 50,000 ಕ್ಕಿಂತ ಹೆಚ್ಚು ಹಾವುಗಳನ್ನು ಹಿಡದಿದ್ದಾರೆ. ಸುಮಾರು 300 ಬಾರಿ ಹಾವುಗಳಿಂದ ಕಚ್ಚಿಸಿಕೊಂಡ್ಡಿದ್ದರು, ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದಾರೆ.








