ನೈರುತ್ಯ ರೈಲ್ವೆ ವಲಯದಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ
ಹುಬ್ಬಳ್ಳಿ, ಡಿಸೆಂಬರ್10: ಹುಬ್ಬಳ್ಳಿಯಲ್ಲಿರುವ ಸೌತ್ ವೆಸ್ಟ್ರನ್ ರೈಲ್ವೇ ಪರ್ಸೋನೆಲ್ ಡಿಪಾರ್ಟ್ಮೆಂಟ್ ಅರ್ಹ ಮತ್ತು ಆಸಕ್ತ ಕ್ರೀಡಾಪಟುಗಳಿಂದ 2020-21ನೇ ಸಾಲಿನ ರೈಲ್ವೆ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ನೈರುತ್ಯ ರೈಲ್ವೆ ವಲಯದಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಲೆವೆಲ್ 2/3 ದರ್ಜೆಯ ಉದ್ಯೋಗ ಒದಗಿಸಲಾಗುತ್ತಿದೆ. 2020-21ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಇದಾಗಿದ್ದು, ಹುದ್ದೆಗಳಲ್ಲಿ ಯಾವುದೇ ಮೀಸಲಾತಿ ಇಲ್ಲ. 21 ಹುದ್ದೆಗಳಲ್ಲಿ 2 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ಇದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡಿರುವುದು ಅವಶ್ಯಕವಾಗಿದೆ.
ಯಾವ ಕ್ರೀಡಾಪಟುಗಳಿಗೆ ಅವಕಾಶ
ಅಥ್ಲೆಟಿಕ್ಸ್
400 ಮೀ. ಹರ್ಡಲ್ಸ್ – 1
ಲಾಂಗ್ ಜಂಪ್ – 2
5000/10000 ಮೀ – 1
800/ 1500 ಮೀ. – 1
ಬ್ಯಾಡ್ಮಿಂಟನ್
ಸಿಂಗಲ್/ಡಬಲ್ – 2
ಕ್ರಿಕೆಟ್
ಆಫ್ ಸ್ಪಿನ್ನರ್ ವಿತ್ ಬ್ಯಾಟ್ಸ್ಮೆನ್ – 1
ಮಿಡಲ್ ಆರ್ಡರ್ ಬ್ಯಾಟ್ಸ್ಮೆನ್ – 1
ಮೀಡಿಯಂ ಪೇಸರ್ – 1
ವೇಟ್ಲಿಫ್ಟಿಂಗ್
55 ಕೆಜಿ – 1
102 ಕೆಜಿ – 1
ಟೇಬಲ್ ಟೆನಿಸ್
ಸಿಂಗಲ್/ ಡಬಲ್ -1
ಹಾಕಿ
ಹಾಫ್ ಬ್ಯಾಕ್ – 2
ಫುಲ್ ಬ್ಯಾಕ್ – 1
ಫಾರ್ವಡ್ – 1
ಸ್ವಿಮಿಂಗ್
50/100/200 ಮೀ. ಫ್ರೀಸ್ಟೈಲ್ – 1
50/100/200 ಮೀ. ಬ್ಯಾಕ್ಸ್ಟ್ರೋಕ್ – 1
ಗಾಲ್ಫ್ – 2
ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ಐಐಟಿ-ಕಾನ್ಪುರದ ಹಳೆಯ ವಿದ್ಯಾರ್ಥಿ
ಅಭ್ಯರ್ಥಿಗಳಿಗೆ 1.1.2021ಕ್ಕೆ ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 25 ವರ್ಷ ವಯಸ್ಸಾಗಿರಬೇಕು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳೆ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ನಿಗದಿಪಡಿಸಲಾಗಿದೆ. ಟ್ರಯಲ್ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮೊತ್ತವನ್ನು ಹಿಂತಿರುಗಿಸಲಾಗುವುದು.

ಯಾವ ಸಾಧನೆ ಪರಿಗಣನೆ?
ಕೆಟಗರಿ ಎ, ಬಿ, ಸಿ ಎಂದು ವಿಭಾಗ ಮಾಡಿದ್ದು, ಒಲಿಂಪಿಕ್ ಗೇಮ್, ವರ್ಲ್ಡ್ ಕಪ್, ವರ್ಲ್ಡ್ ಚಾಂಪಿಯನ್ಷಿಪ್, ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್ವೆಲ್ತ್ ಚಾಂಪಿಯನ್ಷಿಪ್, ಏಷಿಯನ್ ಚಾಂಪಿಯನ್ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್ಸ್, ಯುಎಸ್ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್ಷಿಪ್, ವರ್ಲ್ಡ್ ಯನಿವರ್ಸಿಟಿ ಗೇಮ್ಸ್ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.12.2020
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ : https://bit.ly/37JgNAr
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:
http://www.rrchubli.in
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336718546223521793?s=19
https://twitter.com/SaakshaTv/status/1336719176694546433?s=19








