ಕರಾವಳಿ ಕರ್ನಾಟಕಕ್ಕೆ ನವೆಂಬರ್ ತಿಂಗಳಿಂದ ಕೆಂಪು ಕುಚುಲಕ್ಕಿ ಪೂರೈಕೆ
ಬೆಂಗಳೂರು : ನವೆಂಬರ್ ತಿಂಗಳಿನಿಂದ ಕರಾವಳಿ ಕರ್ನಾಟಕಕ್ಕೆ ಕೆಂಪು ಕುಚುಲಕ್ಕಿ ಪೂರೈಸುವ ನಿರ್ಣಯ ಮಾಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಕರಾವಳಿ ಭಾಗಕ್ಕೆ ಕುಚುಲಕ್ಕಿ ನೀಡುವುದರ ಬಗ್ಗೆ ವಿಧಾನಸೌಧದಲ್ಲಿ ಆಹಾರ ಇಲಾಖೆ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪಡಿತರ ಮೂಲಕ ಕೆಂಪು ಕುಚುಲಕ್ಕಿ ವಿತರಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ಬೇಡಿಕೆ ಇತ್ತು.
ಪಡಿತರದಲ್ಲಿ ನೀಡುವ ಸಾಮಾನ್ಯ ಅಕ್ಕಿ ಊಟ ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ತಯಾರಾಗುವ ಕೆಂಪು ಕುಚುಲಕ್ಕಿ ಬೇಕು ಅಂತ ಜನ ಬೇಡಿಕೆ ಇಟ್ಟಿದ್ದರು.
ಅನೇಕರು ರೇಷನ್ ಪಡೆಯದೆ, ಅಕ್ಕಿ ಮಾರಾಟದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಂಬಂಧ ಆಹಾರ ಸಚಿವರ ಜೊತೆಗೆ ಸಭೆ ಮಾಡಲಾಗಿದೆ.
ಜ್ಯೋತಿ, ಅಭಿಲಾಶ, ಜಯ ತಳಿಯ ಅಕ್ಕಿ ಪಡೆಯಲು ಕೇಂದ್ರದ ಅನುಮತಿ ಬೇಕಿದೆ.
ಕರಾವಳಿ ಜಿಲ್ಲೆಯ ಕೆಂಪು ಕುಚುಲಕ್ಕಿ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುವುದು.
ಮುಂದಿನ ದಿನಗಳಲ್ಲಿ ಪೂರೈಕೆ ಮಾಡೋ ಕೆಲಸ ಮಾಡ್ತೀವಿ ಎಂದು ಮಾಹಿತಿ ನೀಡಿದ್ದಾರೆ.










