ಬಳ್ಳಾರಿ: ಮಾಜಿ ಸಚಿವ ಹಾಗೂ ಶಾಸಕ ಜನಾರ್ಧನ ರೆಡ್ಡಿ ಜೈಲಿಗೆ ಹೋಗುತ್ತಿದ್ದಂತೆ ಅವರ ಆಪ್ತ ಬಳಗದಿಂದ ದೂರವೇ ಇದ್ದರು. ಈಗ ಮತ್ತೆ ಎಲ್ಲರೂ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ರೆಡ್ಡಿ ಹಾಗೂ ರಾಮುಲು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ನಾವು ಒಂದು ದಿನವೂ ವ್ಯರ್ಥ ಮಾಡುವುದಿಲ್ಲ. ನಾವು ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಬಿಜೆಪಿ ಯಾವ ರೀತಿ ಶಕ್ತಿಶಾಲಿಯಾಗಿತ್ತೋ ಹಾಗೇ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಂದಿನಿಂದಲೇ ನಾವು ಪ್ರಚಾರ ಕಾರ್ಯ ಆರಂಭಿಸುತ್ತೇವೆ ಎಂದಿದ್ದಾರೆ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲಿಂದ ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರ, ಅತ್ಯಾಚಾರ, ಭೂ ಕಬಳಿಕೆಯನ್ನ ಜನರು ನೋಡಿದ್ದಾರೆ. ನಮ್ಮ ಅಭ್ಯರ್ಥಿ ಬಂಗಾರು ಹನುಮಂತ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುತ್ತೇವೆ ಎಂದಿದ್ದಾರೆ.
ದಿವಾಕರ್ ಕೂಡಾ ಪ್ರಬಲ ಆಕಾಂಕ್ಷಿ ಆಗಿದ್ದರು. ಆದರೆ, ಇದು ಪಕ್ಷದ ತೀರ್ಮಾನವಾಗಿದೆ. ಹನುಮಂತು ಗೆದ್ದರೆ ಅದು ಪಕ್ಷದ ಗೆಲುವು. ನಮಗೆ ಬಿಜೆಪಿ ಗೆಲ್ಲುವುದು ಮುಖ್ಯ ಎಂದಿದ್ದಾರೆ.
ವಾಲ್ಮೀಕಿ ಹಣ ಬಳಕೆ ಮಾಡಿ ಲೋಕಸಭೆ ಗೆದ್ದಿದ್ದಾರೆ. ನಾಗೇಂದ್ರ ಭ್ರಷ್ಟಾಚಾರ ಮಾಡಿ ಜೈಲಿಗೋಗಿದ್ದಾರೋ ಅಥವಾ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೊ? ಅಷ್ಟು ಟಾಪ್ ಆಗಿದ್ದಾನೆ. ನಾಗೇಂದ್ರನ ರೋಷಾವೇಷ ನೋಡಿದರೆ ನಗು ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.