ಬೆಂಗಳೂರು: ಕೊರೊನಾ ಹೊಡೆತಕ್ಕೆ ಇಡೀ ದೇಶವೇ ಸ್ತಬ್ಧವಾಗಿದೆ. ಬೆಂಗಳೂರಲ್ಲೂ ಜನರು ರಸ್ತೆಗಿಳಿಯದೇ ಮನೆಯಲ್ಲೇ ಉಳಿದಿದ್ದಾರೆ. ಜನರು ರಸ್ತೆಗಿಳಿಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇನ್ನೊಂದು ಕಡೆ ಮೆಟ್ರೋ ಮಂದಿ ಯಾವಾಗಪ್ಪಾ ಇದೆಲ್ಲಾ ಕೊನೆಯಾಗುತ್ತೆ ಅನ್ನೋ ಯೋಚನೆಯಲ್ಲಿದ್ದಾರೆ. ಆದ್ರೆ ಇದೆಲ್ಲದ್ರ ನಡುವೆ ನಾಲ್ಕು ದಿನಗಳಲ್ಲಿ ಬೆಂಗಳೂರಲ್ಲಿ ತುಸು ಆರೋಗ್ಯಕರ ಬದಲಾವಣೆಯಾಗಿದೆ.
ಹೌದು..! ಲಾಕ್ ಡೌನ್ ಪರಿಣಾಮ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಾಯುಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಮೊದಲು ಕೆಲ ಪ್ರದೇಶಗಳಲ್ಲಿ 100ಕ್ಕೂ ಮೇಲಿದ್ದ ವಾಯುಮಾಲಿನ್ಯ ಸೂಚ್ಯಂಕ ಇದೀಗ ಅದರ ಅರ್ಧಕ್ಕೆ ಇಳಿದಿದೆ.
ಲಾಕ್‌ಡೌನ್ ಹಿನ್ನಲೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಯಾಣ ಗಣನೀಯವಾಗಿ ಕುಸಿದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಬಸವರಾಜ್ ವಿ ಪಾಟೀಲ್ ಮಾಹಿತಿ ನೀಡಿದ್ದಾರೆ.








