ಇತ್ತೀಚಿನ ದಿನಗಳಲ್ಲಿ 56 ಸಾವಿರದ ಗಡಿ ದಾಟಿದ್ದ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಳ್ಳಿಯ ದರದಲ್ಲೂ ಇಳಿಕೆ ಕಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ಗೆ 1,989 ಡಾಲರ್ ಮತ್ತು ಬೆಳ್ಳಿಯ ದರ 27.90 ಡಾಲರ್ ಆಗಿದೆ.
ಮುಂಬೈ, ಅಗಸ್ಟ್ 12: ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿದಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 1,317ರೂ ಇಳಿಕೆ ಕಂಡಿದ್ದು, 10 ಗ್ರಾಂ ನ ಬೆಲೆ 54,763ರೂ ಆಗಿದೆ. ಈ ಮೊದಲು ಹಳದಿ ಲೋಹ 56 ಸಾವಿರದ ಗಡಿ ದಾಟಿತ್ತು. ಬೆಳ್ಳಿ ದರದಲ್ಲಿ ಕೆ.ಜಿಗೆ 2,943ರೂ ಇಳಿಕೆ ಕಂಡಿದ್ದು, ಪ್ರತಿ ಕೆ.ಜಿಗೆ – 73,600ರೂ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ಗೆ 1,989 ಡಾಲರ್ ಮತ್ತು ಬೆಳ್ಳಿಯ ದರ 27.90 ಡಾಲರ್ ಆಗಿದೆ.

ಮುಂಬೈ ಷೇರುಮಾರುಕಟ್ಟೆಯಲ್ಲಿ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 52.35 (ಶೇ.0.46) ಪಾಯಿಂಟ್ ಹೆಚ್ಚಳ ಕಂಡು 11,322.50ಕ್ಕೆ ವಹಿವಾಟು ಮುಗಿಸಿದೆ. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಮಂಗಳವಾರ 224.93 (ಶೇ.0.59) ಪಾಯಿಂಟ್ ಏರಿಕೆ ಕಂಡಿದ್ದು, 38,407.01ಕ್ಕೆ ದಿನದ ವಹಿವಾಟು ಮುಗಿಸಿದೆ.
ಆಕ್ಸಿಸ್ ಬ್ಯಾಂಕ್ ಷೇರು ಮೌಲ್ಯ ಶೇ.3.96 ಹೆಚ್ಚಾಗಿದ್ದು, ಇಂಡಸ್ಲ್ಯಾಂಡ್ ಬ್ಯಾಂಕ್, ಐಟಿಸಿ, ಎಚ್ಡಿಎಫ್ಸಿ ಬ್ಯಾಂಕ್, ಟಾಟಾ ಸ್ಟೀಲ್, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯಗಳಲ್ಲಿ ಹೆಚ್ಚಳ ಕಂಡು ಬಂದಿದೆ.








