ಬಾಲಿವುಡ್ ನಟ ಸುಶಾಂತ್ ಸತ್ತು ಒಂದೂವರೆ ತಿಂಗಳು ಕಳೆದಿದೆ. ಈ ಪ್ರಕರಣ ಸದ್ಯ ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದ್ದು, ಸುಶಾಂತ್ ಅವರ ತಂದೆ ಕೆಕೆ ಸಿಂಗ್
ಅವರು ಸುಶಾಂತ್ ಪ್ರೇಯಸಿ ರೆಹಾ ಚಕ್ರಬೊರ್ತಿ ವಿರುದ್ಧ ಬಿಹಾರದ ಪಟ್ನಾ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಿದ್ರು. ರೆಹಾ ಜೊತೆಗೆ ಅªರ ಕುಟುಂಬದ ಸದಸ್ಯರನ್ನೊಳಗಂಡಂತೆ ಒಟ್ಟು 6 ಜನರ ವಿರುದ್ಧ ಮೋಸ, ಕಳ್ಳತನ, ಮಾನಸಿಕ ಕಿರುಕುಳದ ದಾಖಲಾಗಿತ್ತು. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ರೆಹಾಗೆ ಬಂಧನದ ಭೀತಿ ಎದುರಾಗಿದೆ. ಹೀಗಾಗಿ ಈಗಾಗಲೇ ರೆಹಾ ಈ ಸಂಬಂಧ ವಕೀಲರನ್ನು ಭೇಟಿ ಮಾಡಿದ್ದು, ರೆಹಾ ಪರ ವಕೀಲರು ಪೊಲೀಸರ ವಿಚಾರಣೆಯನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸುವಂತೆ ಆದೇಶಿಸಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲದೇ ರೆಹಾ ತಮ್ಮ ಪರ ವಕೀಲರಾದ ಆನಂದಿ ಫರ್ನಾಂಡೀಸ್ ಸಹಾಯದಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ರೆಹಾ ಜೂನ್ 8 ರಂದು ಸಾಕಷ್ಟು ಆಭರಣ, ಹಣ, ಲ್ಯಾಪ್‌ಟಾಪ್, ಸುಶಾಂತ್‌ನ ಆರೋಗ್ಯ ಸಂಬಂಧಿ ದಾಖಲೆಗಳನ್ನು ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದರು. ಸುಶಾಂತ್ ನಂಬರ್ ಅನ್ನು ಸಹ ಬ್ಲಾಕ್ ಮಾಡಿದ್ದರು ಎಂದು ಸುಶಾಂತ್ ರ ತಂದೆ ಆರೋಪದಲ್ಲಿ ಉಲ್ಲೇಖಿಸಿದ್ದು, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಅಲ್ಲದೇ ಸುಶಾಂತ್ ರನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸುವುದಾಗಿ ರೆಹಾ ಧಮ್ಕಿ ಹಾಕಿದ್ದರಂತೆ. ಅಲ್ಲದೇ ಸುಶಾಂತ್ ಗೆ ಯಾವುದೇ ಸಿನೆಮಾಗಳನ್ನೂ ಒಪ್ಪಿಕೊಳ್ಳಲು ಬಿಡುತ್ತಿರುಲಿಲ್ಲ ಎಂದು ಸುಶಾಂತ್ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ
ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...








