ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ 161 ಕೈದಿಗಳ ಬಿಡುಗಡೆ – Saaksha Tv
ಬೆಂಗಳೂರು: ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ 161 ಕೈದಿಗಳನ್ನ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲು ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ 161 ಕೈದಿಗಳನ್ನು ರಾಜ್ಯಪಾಲರ ಅನುಮೋದನೆ ಬಳಿಕ ಆಯಾ ಸಜಾಬಂಧಿಗಳನ್ನ ಅವಧಿಗೂ ಮುನ್ನ ಬಿಡುಗಡೆಗೊಳಿಸಲು ಕಾರಾಗೃಹ ಇಲಾಖೆ ಸಿದ್ಧತೆ ನಡೆಸಿದೆ.
2006-7ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಿಸಿದ್ದರು. ಆ ಬಳಿಕ ಜೈಲಿನಲ್ಲಿ ಹಲವು ಅಕ್ರಮಗಳು ಕಂಡು ಬಂದ ಬಳಿಕ ಹಲವು ವರ್ಷ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶ ಸಿಕ್ಕಿರಲಿಲ್ಲ. ಅದಾದ ಬಳಿಕ 2021ರಲ್ಲಿ 103 ಸಜಾ ಬಂಧಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು.
2021 ಜುಲೈನಲ್ಲಿ ನಡೆದ ಸ್ಥಾಯಿ ಸಲಹಾ ಮಂಡಳಿಯ ಸಮಿತಿ ಪರಿಶೀಲನೆ ಬಳಿಕ ಒಟ್ಟು 161 ಸನ್ನಡತೆ ಸಜಾಬಂಧಿಗಳನ್ನು ಬಿಡುಗಡೆ ಮಾಡಲು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಜ್ಯಪಾಲರು ಈ ಪ್ರಸ್ತಾವಕ್ಕೆ ಸಹಿ ಹಾಕಿದ್ದು, ಪ್ರಸಕ್ತ ಸಾಲಿನಲ್ಲಿ 161 ಸನ್ನಡತೆ ಕೈದಿಗಳು ಬಿಡುಗೆಡಯಾಗಲಿದ್ದಾರೆ.








