ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಚಲನ ನಿರ್ಣಯ
ಮುಂಬೈ : ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಂಚಲನ ನಿರ್ಧಾರವನ್ನ ಪ್ರಕಟಿಸಿದೆ. ತನ್ನ ಆಯಿಲ್-ಟು-ಕೆಮಿಕಲ್ಸ್ (ಒಟಿಸಿ) ವ್ಯವಹಾರವನ್ನು ಸ್ವತಂತ್ರ ಅಂಗಸಂಸ್ಥೆಯಾಗಿ ಅಭಿವೃದ್ಧಿಪಡಿಸುತ್ತಿರುವುದಾಗಿ ಮಂಗಳವಾರ ಘೋಷಿಸಿದೆ. ವ್ಯಾಪಾರ ವರ್ಗಾವಣೆಯೊಂದಿಗೆ ಹೊಸದಾಗಿ ರೂಪುಗೊಂಡ ಅಂಗಸಂಸ್ಥೆಯ ಮೇಲೆ ಶೇ 100 ರಷ್ಟು ನಿರ್ವಹಣೆ ಮತ್ತು ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಆರ್ ಐಎಲ್ ತಿಳಿಸಿದೆ.
ಪುನರ್ ವ್ಯವಸ್ಥಿಕರನ ನಂತ್ರ ಪ್ರಮೋಟರ್ ಗ್ರೂಪ್ ಒಟೊಸಿಯ ವ್ಯವಹಾರದಲ್ಲಿ ಶೇ 49.14 ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ಕಂಪನಿಯ ಷೇರುದಾರರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ರಿಲಯನ್ಸ್ ಹೇಳಿದೆ. ಇದಕ್ಕೆ ಸಂಬಂಧಿಸಿ ಈಗಾಗಲೇ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಷೇರು ವಿನಿಮಯ ಕೇಂದ್ರಗಳ ಅನುಮೋದನೆ ದೊರೆತಿದೆ ಎಂದು ಆರ್ಐಎಲ್ ತಿಳಿಸಿದೆ.ಆದರೆ, ಈಕ್ವಿಟಿ ಷೇರುದಾರರು, ಸಾಲದಾತರು, ಐಟಿ ಮತ್ತು ಎನ್ಸಿಎಲ್ಟಿ ಪೀಠಗಳಿಂದ ಇನ್ನೂ ಅನುಮತಿ ದೊರೆತಿಲ್ಲ ಎಂದು ಅದು ಹೇಳಿದೆ. 2022 ರ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ಎನ್ಸಿಎಲ್ಟಿ ಅನುಮೋದನೆ ಬರಬಹುದೆಂದು ರಿಲಿಯನ್ಸ್ ಆಶಿಸುತ್ತಿದೆ. ಕಂಪನಿಯ ಎಲ್ಲಾ ಸಂಸ್ಕರಣೆ, ಮಾರ್ಕೆಟಿಂಗ್ ಮತ್ತು ಪೆಟ್ರೋಕೆಮಿಕಲ್ ಸ್ವತ್ತುಗಳನ್ನು ಹೊಸ ಅಂಗಸಂಸ್ಥೆಗೆ ವರ್ಗಾಯಿಸಲಾಗುತ್ತದೆ. ಸೌದಿ ಅರಾಮ್ಕೊ ಜೊತೆಗಿನ ಒಪ್ಪಂದವು ಹೂಡಿಕೆದಾರರ ಮೂಲಕ ಹೆಚ್ಚಿನ ಬಂಡವಾಳವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.