ವಿವಿಧ ಕಾರಣಗಳಿಂದ BPL ಪಡಿತರ ಚೀಟಿ ಕಳೆದುಕೊಂಡಿದ್ದ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ರಾಜ್ಯ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ.
ಅನರ್ಹರೆಂದು ಪರಿಗಣಿಸಿ APL ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದ್ದ BPL ಕಾರ್ಡ್‌ಗಳನ್ನು, ನಿಜವಾಗಿಯೂ ಅರ್ಹರಾಗಿರುವ ಕುಟುಂಬಗಳಿಗೆ ಮರುಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ, ತಮ್ಮ BPL ಕಾರ್ಡ್ ಅನ್ನು ಮರುಪಡೆಯಬಹುದು ಎಂದು ಇಲಾಖೆ ತಿಳಿಸಿದೆ.
ಕುಟುಂಬ ತಂತ್ರಾಂಶದ (ಡೇಟಾಬೇಸ್) ಪರಿಶೀಲನೆ ವೇಳೆ 13,87,651 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಈ ಪರಿಶೀಲನೆ ಕೈಗೊಳ್ಳಲಾಗಿದೆ.
ಸರ್ಕಾರದ ಸೂಚನೆಯಂತೆ, ನಿಜವಾದ ಅರ್ಹರು ತಮ್ಮ ಆದಾಯ, ಕುಟುಂಬ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಗದಿತ ಪ್ರಕ್ರಿಯೆಯ ಮೂಲಕ BPL ಕಾರ್ಡ್ ಮರುಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು.






