ರೆಮ್ಡಿಸಿವಿರ್ ನಿಂದ ಜೀವ ಉಳಿಯುತ್ತೆ ಅನ್ನೋದನ್ನ ತಲೆಯಿಂದ ತೆಗೆದುಹಾಕಿ”
ವಿಜಯಪುರ : ರೆಮಿಡಿಸಿವರ್ ಇದ್ದರೆ ನಮ್ಮ ಜೀವ ಬದುಕುತ್ತದೆ ಎಂಬುದು ಪೆಸೇಂಟ್ ಗಳು ತಲೆಯಿಂದ ತಗೆದು ಹಾಕಬೇಕು. ಡಾಕ್ಟರ್ ಅದನ್ನು ನಿರ್ಣಯ ಮಾಡುತ್ತಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸಿವರ್ ಔಷಧಿ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅದರ ಬೇಡಿಕೆ ಇದೆ.ರೆಮಿಡಿಸಿವರ್ ಇದ್ದರೆ ನಮ್ಮ ಜೀವ ಬದುಕುತ್ತದೆ ಎಂಬುದು ಪೆಸೇಂಟ್ ಗಳು ತಲೆಯಿಂದ ತಗೆದು ಹಾಕಬೇಕು. ಡಾಕ್ಟರ್ ಅದನ್ನು ನಿರ್ಣಯ ಮಾಡುತ್ತಾರೆ. ಡಾಕ್ಟರ್ ಮಾರ್ಗದರ್ಶನದ ಅನ್ವಯ ರೆಮಿಡಿಸಿವರ್ ಕೊಡುವ ಕೆಲಸ ಮಾಡಲಾಗುತ್ತದೆ. ಜನರು ಗಾಬರಿಯಾಗಬಾರದು ಎಂದು ಹೇಳಿದ್ದಾರೆ.
ಇನ್ನು ಜಿಲ್ಲೆಯಲ್ಲಿ ರೆಮಿಡಿಸಿವರ್ ಔಷಧಿ ಕಾಳ ಸಂತೆಯಲ್ಲಿ ಮಾರಾಟ ವಿಚಾರವಾಗಿ ಮಾತನಾಡಿ, ರೆಮಿಡಿಸಿವರ್ ಔಷದಿ ದುರುಪಯೋಗವನ್ನು ಕೆಲ ಆಸ್ಪತ್ರೆ ಸಿಬ್ಬಂದಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಪ್ರಕರಣವನ್ನು ಸಹಿತ ದಾಖಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದುರುಪಯೋಗ ಪಡೆಸಿಕೊಳ್ಳುವದು ಮಾನವೀಯತೆ ಅಲ್ಲ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲದೇ ಅವರ ಮೇಲೆ ಕ್ರಿಮಿನಲ್ ಪ್ರಕರಣ ಸಹಿತ ದಾಖಲಿಸಲಾಗುವದು ಎಂದ ಎಚ್ಚರಿಕೆ ನೀಡಿದರು.









