ಜಗತ್ತಿನಾದ್ಯಂತ ರುದ್ರ ತಾಂಡವವಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಗೆ ಕೋವಿಡ್-19 ಎಂದು ವಿಶ್ವ ಆರೋಗ್ಯ ಸಂಸ್ಥೆ ಮರುನಾಮಕರಣ ಮಾಡಿದೆ.
ಕೋವಿಡ್ -19 ಎಂದರೆ ಸಿಓ-ಕೊರೊನಾ, ವಿ-ವೈರಸ್ ಹಾಗೂ ಡಿ-ಡಿಸೀಸ್. ಇದು 2019 ಡಿಸೆಂಬರ್ 31 ರಂದು ಪತ್ತೆಯಾದ ಕಾರಣ 19 ಎಂದು ಸೇರಿಸಲಾಗಿದೆ
ಈಗಾಗಲೇ ಚೀನಾದಲ್ಲಿ ಸಾವಿನ ಸಂಖ್ಯೆ 1000 ದಾಟಿದ್ದು, ಸೋಂಕಿತರ ಪ್ರಮಾಣ ಏರುಮುಖದಲ್ಲಿ ಸಾಗುತ್ತಿದ್ದು, 44,200 ಜನರಲ್ಲಿ ಸೋಂಕು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞ ವೈದ್ಯರ ತಂಡ ಚೀನಾಕ್ಕೆ ಆಗಮಿಸಿದ್ದು ರೋಗ ನಿಯಂತ್ರಣಕ್ಕೆ ಸೂಕ್ತ ನೆರವು ನೀಡುತ್ತಿದೆ.
ಕೊರೋನಾ ವೈರಸ್ ಗೆ ಲಸಿಕೆ ಕಂಡುಹಿಡಿದಿರುವುದಾಗಿ ಬ್ರಿಟನ್ ವಿಜ್ಞಾನಿಗಳ ತಂಡವೊಂದು ಹೇಳುತ್ತಿದ್ದು, ಅದನ್ನು ಇಲಿಗಳ ಮೇಲೆ ಪ್ರಯೋಗಿಸಲು ಆರಂಭಿಸಿದೆ.
ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು ನೇಮಕಾತಿ 2025
CIIL Recruitment 2025 – ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು 2025ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು...